ಅಕ್ಷರ ಕಲಿಸಿದ ಗುರುವನ್ನು ಸ್ಮರಿಸಿ

FotoJet (1)
Published on

 ಕುದೂರು: ಪ್ರತಿಯೊಬ್ಬರ ಜೀವನ ಉತ್ತಮವಾಗಿ ರೂಪಗೊಳ್ಳಲು ಶಿಕ್ಷಕರ ಪಾತ್ರ ಬಹಳ ಮುಖ್ಯ ಎಂದು ಶಿಕ್ಷಕ ಗಣೇಶ್. ಸಿ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆಯ 2001-2002ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹೋಬಳಿಯ ಬೆಟ್ಟಹಳ್ಳಿಯ ಶ್ರೀ ಗುಡ್ಡದ ರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 5ನೇ ವರ್ಷದ ಸ್ನೇಹ ಸಂಗಮ ಮತ್ತು ಗುರುವಂದನೆ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದ ಅವರು,

ಶಾಲಾ ಜೀವನದ ಗುರುಗಳನ್ನು ನೆನೆಯುವುದು ವಿದ್ಯಾರ್ಥಿಯ ಕರ್ತವ್ಯ. ಎರಡು ದಶಕಗಳು ಕಳೆದರೂ ಅಕ್ಷರ ಕಲಿಸಿದ ಗುರುಗಳನ್ನು ಸ್ಮರಿಸಿ, ಎಲ್ಲರೂ ಒಟ್ಟಾಗಿ ಸೇರಿಸಿ ಸ್ನೇಹ ಸಂಗಮ ಕಾರ್ಯಕ್ರಮ ಹಮ್ಮಿಕೊಂಡಿರುವುದು ಮಾದರಿ. ಪ್ರಸ್ತುತ ಶಿಕ್ಷಣ ಹಾಗೂ ಹಿಂದಿನ ಶಿಕ್ಷಣಕ್ಕೆ ಬಹಳ ವ್ಯತ್ಯಾಸವಿದ್ದು, ಇಂದಿನ ಕಾಲಘಟ್ಟದಲ್ಲಿ ಭಾವನಾತ್ಮಕ ಸಂಬಂಧ ಹೊಂದಿದ ಸ್ನೇಹಸಮ್ಮೇಳನ ಎಲ್ಲರಲ್ಲೂ ಖುಷಿ ತಂದಿದೆ ಎಂದು ಹರ್ಷವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net