ಸುಖದಲ್ಲಿದ್ದಾಗ ದೇವರನ್ನು ಮರೆಯದಿರಿ

ಸುಖದಲ್ಲಿದ್ದಾಗ ದೇವರನ್ನು ಮರೆಯದಿರಿ
Published on

ಶನಿವಾರಸಂತೆ: ಗ್ರಾಮದ ಜನತೆ ಒಗ್ಗಟಿನಿಂದ ದೇವಾಲಯ ನಿರ್ಮಿಸಿಕೊಳ್ಳುವ ಮೂಲಕ ನೆಮ್ಮದಿಗಾಗಿ ಪ್ರಾರ್ಥಿಸಬೇಕು ಎಂದು ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.

ದೊಡ್ಡಭಂಡಾರ ಗ್ರಾಮದ ಶ್ರೀ ಮಲ್ಲೇಶ್ವರಸ್ವಾಮಿ ದೇಗುಲ ಉದ್ಘಾಟನೆ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿದರು.
ಮನುಷ್ಯ ಸುಖದಲ್ಲಿದ್ದಾಗ ದೇವರನ್ನು ಮರೆಯಬಾರದು, ಶಾಂತಿ-ನೆಮ್ಮದಿಗೆ ಸದಾ ದೇವರ ಪ್ರಾರ್ಥನೆ ಅವಶ್ಯಕವಾಗಿದೆ. ಪ್ರತಿಯೊಬ್ಬರೂ ತಮ್ಮ ಹುಟ್ಟೂರಿನ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.

ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಮಠಾಧೀಶ ಶ್ರೀ ಸದಾಶಿವಸ್ವಾಮೀಜಿ ಮಾತನಾಡಿ, ಮನುಷ್ಯ ಧರ್ಮದ ತಳಹದಿಯಲ್ಲಿ ಜೀವನ ನಡೆಸಬೇಕು. ವಿಜ್ಞಾನ -ತಂತ್ರಜ್ಞಾನದಿಂದ ಅನುಕೂಲವಾಗುತ್ತಿದ್ದರೂ, ನೆಮ್ಮದಿಯ ಜೀವನಕ್ಕೆ ಧಾರ್ಮಿಕ ಕೇಂದ್ರಗಳ ಅವಶ್ಯಕತೆ ಇದೆ ಎಂದರು.

ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಶ್ರೀ ತಪೋವನ ಮನೆಹಳ್ಳಿ ಮಠಾಧೀಶ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಧಾರ್ಮಿಕ ಉಪನ್ಯಾಸ ನೀಡಿದರು. ದೇವಾಲಯ ಸಮಿತಿ ಅಧ್ಯಕ್ಷ ಶಿವರಾಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶೇಷೇಗೌಡ, ಉಪಾಧ್ಯಕ್ಷ ಜವರೇಗೌಡ, ಬೆಸೂರು ಗ್ರಾಪಂ ಉಪಾಧ್ಯಕ್ಷ ಡಿ.ಆರ್.ಹರೀಶ್, ಶಿವರಾಮ್, ಹರೀಶ್, ಡಿ.ಎಲ್.ಮೂರ್ತಿ ಇತರರಿದ್ದರು. ವಿಗ್ರಹ ಕೆತ್ತನೆ ಮಾಡಿದ ಶಿಲ್ಪಿ ಎಚ್.ಎಸ್.ವರಪ್ರಸಾದ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net