

ರಾಮದುರ್ಗ: ಧರ್ಮ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ನೆಮ್ಮದಿ ಸಾಧ್ಯ. ಪವಿತ್ರ ಶ್ರಾವಣ ಮಾಸದಲ್ಲಿ ಏರ್ಪಡಿಸುವ ಧಾರ್ಮಿಕ ಸಭೆ, ಸಮಾರಂಭ, ಜಾತ್ರೆಗಳು ಜನರಲ್ಲಿ ಭ್ರಾತ್ವತ್ವ ಮನೋಭಾವ ಬೆಳೆಸುತ್ತವೆ ಎಂದು ನಿವೃತ್ತ ಅರಣ್ಯಾಧಿಕಾರಿ ಸಿ.ಬಿ.ಪಾಟೀಲ ಹೇಳಿದರು.
ತಾಲೂಕಿನ ಹಿರೇತಡಸಿ ಗ್ರಾಮದಲ್ಲಿ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಧರ್ಮಸಭೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಜನರಲ್ಲಿ ಧಾರ್ಮಿಕ ಕಾರ್ಯಕ್ರಮ ಬಗೆಗಿನ ಒಲವು ಕಡಿಮೆಯಾಗುತ್ತಿರುವುದು ವಿಷಾದನೀಯ. ಗ್ರಾಮೀಣ ಪ್ರದೇಶದಲ್ಲಿ ಧಾರ್ಮಿಕ ಸಮಾರಂಭ ಕೈಗೊಳ್ಳುವುದರಿಂದ ಯುವ ಪೀಳಿಗೆಗೆ ಮಾರ್ಗದರ್ಶನ ನೀಡಿದಂತಾಗುತ್ತದೆ ಎಂದರು.
ಬಿಜೆಪಿ ಮುಖಂಡ ಬಸವರಾಜ ಸೋಮಗೊಂಡ ಮತ್ತು ಮುಳ್ಳೂರ ಅನ್ನದಾನೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಹೊಸಕೇರಿ ಬಸವ ನಗರದ ಶ್ರೀ ಮುರುಂದ್ರ ಕೋರಣೇಶ್ವರ ಮಠದ ಮಾತೆ ನೀಲಲೋಚನಾ ತಾಯಿ, ಚೆನ್ನಯ್ಯ ತೋಟಯ್ಯ ಹಿರೇಮಠ ಆಶೀರ್ವಚನ ನೀಡಿದರು. ಗುರುರಾಜ ಕೊಣ್ಣೂರ, ಸಂಗಳ ಗ್ರಾಮದ ಡಾ.ಸುಭಾಸ ಚಂದ್ರಶೇಖರ ಉಪನ್ಯಾಸ ನೀಡಿದರು.
ಕಾಂಗ್ರೆಸ್ ಮುಖಂಡ ಪರುತಗೌಡ ಪಾಟೀಲ, ಮಾಜಿ ಗ್ರಾಪಂ ಅಧ್ಯ ರಮೇಶ ಹೊಳೆಯನ್ನವರ, ರಾಜಪ್ಪ ಜಾಧವ, ಶೇಖರಗೌಡ ಪಾಟೀಲ, ರಮೇಶ ಜಾಧವ, ಮಂಜುನಾಥ ಜಾಧವ, ಪುಂಡಲೀಕ ಜಾಧವ, ಶಿಕ ಎಂ.ಜಿ.ಅಂಗಡಿ ಇತರರಿದ್ದರು. ಪತ್ರಕರ್ತ ಗೌಡಪ್ಪಗೌಡ ಪಾಟೀಲ ಸ್ವಾಗತಿಸಿದರು. ಶಿಕ ಎಲ್.ವಿ.ಅಪ್ಪಾಜಿಗೌಡ್ರ ನಿರೂಪಿಸಿದರು.