

ಗಂಗೊಳ್ಳಿ: ದೇವರಲ್ಲಿ ಭಕ್ತಿ, ಕರ್ತವ್ಯ ನಿಷ್ಠೆ ಇದ್ದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ನವರಾತ್ರಿ ಸಂದರ್ಭ ಶ್ರೀ ಶಾರದೆಯ ಆರಾಧನೆ ಮತ್ತು ನಿತ್ಯ ನಮ್ಮ ಮನೆಗಳಲ್ಲಿ ದೇವರ ಭಜನೆ ಸಂಕೀರ್ತನೆ ಮಾಡುವುದರಿಂದ ಅಭಿವೃದ್ಧಿ ಹೊಂದಿಯಾಗಬಹುದು ಎಂದು ಕುಂದಾಪುರದ ವಕೀಲ ರವಿಕಿರಣ್ ಮುರ್ಡೇಶ್ವರ ಹೇಳಿದರು.
ಗಂಗೊಳ್ಳಿ ಶ್ರೀ ಶಾರದೋತ್ಸವ ಸಮಿತಿಯ ಸುವರ್ಣ ಮಹೋತ್ಸವ-2024 ಅಂಗವಾಗಿ ಗಂಗೊಳ್ಳಿಯ ಸ.ವಿ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಉದ್ಯಮಿ ಶೇಷಯ್ಯ ಕೊತ್ವಾಲ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಮಂಜುನಾಥ ಗಾಣಿಗ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಇದೇ ಸಂದರ್ಭ ಊರಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಹಾಗೂ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ರಾಜೀವ ಕೋಟ್ಯಾನ್, ಪ್ರಭಾಕರ ಕುಂದರ್ ಕೋಟ,ಗೋಪಾಲ ಗೋವಿಂದ ಗಾಣಿಗ, ಶಿವ ಆರ್.ಪೂಜಾರಿ, ಮಂಜುನಾಥ ಸಾಲಿಯಾನ್ ತ್ರಾಸಿ, ನಿತಿನ್ ಖಾರ್ವಿ, ಸವಿತಾ ಯು.ದೇವಾಡಿಗ, ಸುಜಾತಾ ಬಾಬು ಖಾರ್ವಿ ಉಪಸ್ಥಿತರಿದ್ದರು. ಸತೀಶ ಜಿ. ಸ್ವಾಗತಿಸಿದರು. ಬಿ.ಲಕ್ಷ್ಮೀಕಾಂತ ಮಡಿವಾಳ ಪ್ರಸ್ತಾವನೆಗೈದರು. ಶ್ರೀಧರ ಎನ್.ಸಕ್ಲಾತಿ ವಂದಿಸಿದರು. ಸುಂದರ ಜಿ. ನಿರೂಪಿಸಿದರು.