ಧಾರ್ಮಿಕ ಕಾರ್ಯಗಳಿಂದ ನೆಮ್ಮದಿ ಸಾಧ್ಯ

08ALD01
ಅಳವಂಡಿ ಶ್ರೀಗೋಣಿಬಸವೇಶ್ವರ ನೂತನ ಸಮುದಾಯ ಭವನದಲ್ಲಿ ನವಗ್ರಹ, ರುದ್ರಾಭಿಷೇಕ ಕಾರ್ಯಕ್ರಮ ಜರುಗಿತು. ಶ್ರೀಮರುಳಾರಾದ್ಯ ಶಿವಾಚಾರ್ಯ, ಪ್ರಮುಖರಾದ ಬಸವರಡ್ಡಿ, ರಾಮರಡ್ಡಿ, ಆನಂದರಡ್ಡಿ, ಶರಣಪ್ಪ, ದೊಡ್ಡವೀರಪ್ಪ, ಬಸಪ್ಪ, ಬುಜಂಗಪ್ಪ, ಗುರುಬಸವರಾಜ, ಶಂಕ್ರಪ್ಪ ಇತರರಿದ್ದರು.
Published on

ಅಳವಂಡಿ: ಮನುಷ್ಯನ ಅತಿಯಾದ ಮೋಬೈಲ್ ಬಳಕೆಯಿಂದ ಮನಸ್ಸಿನ ಮೇಲಿನ ಹಿಡಿತ ತಪ್ಪುತ್ತಿದೆ. ಮನಸ್ಸು ಉಲ್ಲಾಸ, ಉತ್ಸಾಹ ಕಳೆದುಕೊಂಡು ಅರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾನೆ ಎಂದು ಶ್ರೀಮರುಳಾರಾದ್ಯ ಶಿವಾಚಾರ್ಯ ತಿಳಿಸಿದರು.

ಗ್ರಾಮದ ಶ್ರೀಗೋಣಿ ಬಸವೇಶ್ವರ ನೂತನ ಸಮುದಾಯ ಭವನದಲ್ಲಿ ನಡೆದ ರುದ್ರಾಭಿಷೇಕ ಹಾಗೂ ನವಗ್ರಹ ಪೂಜಾ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.

ಜಂಜಾಟ, ಅವಸರದ ಬದುಕಿನ ಬೆನ್ನು ಹತ್ತಿದ ಮನುಷ್ಯನಿಗೆ ಸಮಾಧಾನ ಎನ್ನುವುದು ಕನಸಿನ ಕುದುರೆಯಾಗಿದೆ. ಧಾರ್ಮಿಕ, ಸಾಮಾಜಿಕ, ಪುರಾಣ, ಪ್ರವಚನಗಳಿಂದ ದೂರ ಸರಿಯುತ್ತಿದ್ದಾನೆ. ನೆಮ್ಮದಿ ಕಂಡುಕೊಳ್ಳಲು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಹಾಗೂ ಎಲ್ಲರೊಂದಿಗೆ ಬೆರೆತು ಸಂತೋಷದ ಜೀವನ ಕಟ್ಟಿಕೊಳ್ಳಬೇಕು ಎಂದರು.

ಪ್ರಮುಖರಾದ ಬಸವರಡ್ಡಿ ಇಮ್ಮಡಿ, ರಾಮರಡ್ಡಿ ಗದ್ದಿಕೇರಿ, ಆನಂದರಡ್ಡಿ ಮುತ್ತಾಳ, ದೊಡ್ಡವೀರಪ್ಪ, ಬಸಪ್ಪ ಹಂಚಿನಾಳ, ಬುಜಂಗಪ್ಪ, ಶರಣಪ್ಪ ವಾಲಿಕಾರ, ಬಸವರಾಜ ಶೆಟ್ಟರ, ಶರಣಪ್ಪ ಜೋಗಿನ, ಶಂಕ್ರಪ್ಪ ಕರಡಿ, ತಿಪ್ಪಣ್ಣ ತಳಬಾಳ, ಪ್ರಕಾಶ, ದೇವಪ್ಪ ಕಟ್ಟಿಮನಿ, ಬೀಮರಡ್ಡಿ, ಚಿಕ್ಕವೀರಜ್ಜ, ಮಲ್ಲಪ್ಪ, ಸುಬಾಸ ಕರಡಿ, ಗುರುಬಸವರಾಜ ಹಳ್ಳಿಕೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net