ದೇವರ ಅನುಗ್ರಹದಿಂದ ಊರಿಗೆ ಶ್ರೇಯಸ್ಸು: ಹೆರ್ಗ ಹರಿಪ್ರಸಾದ್ ಭಟ್ ಅಭಿಮತ

New Project (2)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಉತ್ಸವದಿಂದ ಸಂತುಷ್ಟರಾಗುವ ದೇವರ ಅನುಗ್ರಹದಿಂದ ಊರಿಗೆ ಶ್ರೇಯಸ್ಸು ಎಂದು ಹೆರ್ಗ ಹರಿಪ್ರಸಾದ್ ಭಟ್ ಹೇಳಿದರು.

ಶುಕ್ರವಾರ ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನಿರ್ಮಾಣಗೊಳ್ಳಲಿರುವ ಬ್ರಹ್ಮರಥಕ್ಕೆ ಮುಹೂರ್ತ ಸಂದರ್ಭ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಘವೇಂದ್ರ ಕೊಡಂಚ ಧಾರ್ಮಿಕ ಪೂಜಾ ವಿಧಿ ನೆರವೇರಿಸಿದರು. ಉಜಿರೆಯ ವೆಂಕಟಕೃಷ್ಣ, ಅರ್ಚಕ ಪುರೋಹಿತ ಕಿರಣ್ ಕುಮಾರ್ ಮತ್ತು ಮನೆಯವರು ಸೇವಾರ್ಥವಾಗಿ ಶ್ರೀ ಜನಾರ್ದನ ಸ್ವಾಮಿಗೆ ಬ್ರಹ್ಮರಥ ಸಮರ್ಪಿಸಲು ಸಂಕಲ್ಪಿಸಿ, ಕೋಟೇಶ್ವರದ ರಥ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಮಾರ್ಗದರ್ಶನದಲ್ಲಿ ರಾಜಗೋಪಾಲ ಆಚಾರ್ಯ ಅವರಿಂದ ರಥ ನಿರ್ಮಾಣ ಕಾರ್ಯ ನಡೆಯಲಿದ್ದು, ಹಿರಿಯರಾದ ಶಂಕರ ಆಚಾರ್ಯ ವೀಳ್ಯ ಪ್ರಸಾದ ಸ್ವೀಕರಿಸಿದರು. ಅರ್ಚಕ ಶ್ರೀನಿವಾಸ ಹೊಳ್ಳ ನೇತೃತ್ವದಲ್ಲಿ ಗಣಪತಿ ಯಾಗ ನಡೆಯಿತು. ಅಶೋಕ ಕುಮಾರ್ ದಂಪತಿ ಸಂಕಲ್ಪ ನೆರವೇರಿಸಿದರು.

ಕ್ಷೇತ್ರದ ನಾಳ್ವಿಕೆ ಶಿವರಾಮ ಪಡುವೆಟ್ನಾಯ, ಉಡುಪಿ ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ದಿವಾನ ಪ್ರಸನ್ನ ಆಚಾರ್ಯ, ಆನೆಗುಡ್ಡೆ ಕ್ಷೇತ್ರದ ಅರ್ಚಕ ಶ್ರೀಧರ ಉಪಾಧ್ಯಾಯ, ರಥ ಸೇವಾರ್ಥಿಗಳಾದ ಆಶಾ ಸಿ.ರಾವ್, ಅಶೋಕಕುಮಾರ್ ಮತ್ತು ಮನೆಯವರು, ಅನಂತಕೃಷ್ಣ ಮೂಡಣ್ಣಾಯ, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಕೆ.ಮೋಹನ್ ಕುಮಾರ್, ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಡಾ.ಶ್ರೀಧರ ಭಟ್, ರಾಘವೇಂದ್ರ ಬೈಪಾಡಿತ್ತಾಯ, ಪ್ರಕಾಶ್ ಕುದ್ದಣ್ಣಾಯ, ಲಕ್ಷ್ಮಣ ಸಫಲ್ಯ, ಭರತ್ ಕುಮಾರ್, ರಾಜೇಶ್ ಪೈ, ರಾಮಚಂದ್ರ ಶೆಟ್ಟಿ, ರವೀಂದ್ರ ಶೆಟ್ಟಿ ಬಳಂಜ, ಗೋವಿಂದ ದಾಮ್ಲೆ, ರವಿ ಚೆಕ್ಕಿತ್ತಾಯ, ಪಾಂಡುರಂಗ ಬಾಳಿಗಾ, ವಿದ್ಯಾಕುಮಾರ್ ಕಾಂಚೋಡು, ವಿಶ್ವನಾಥ ಶೆಟ್ಟಿ, ವನಿತಾ ಶೆಟ್ಟಿ, ರಾಮಣ್ಣ ಗೌಡ, ಹುಕುಂ ರಾಮ್ ಪಟೇಲ್, ಪ್ರಶಾಂತ್ ಜೈನ್, ಸುಧಾಕರ ಶೆಟ್ಟಿಗಾರ್, ಮೋಹನ ಶೆಟ್ಟಿಗಾರ್, ಅರುಣ್‌ಕುಮಾರ್ ಎಂ.ಎಸ್., ಅತ್ತಾಜೆ ಕೇಶವ ಭಟ್, ಜಯರಾಮ ಪಡ್ಡಿಲ್ಲಾಯ, ಶಿವರಾಮ ಬಿ.ಕೆ., ನಾಗೇಶ್ ರಾವ್, ಅರವಿಂದ ಕಾರಂತ್, ಶಾಮ ಭಟ್ ಅತ್ತಾಜೆ, ಸಂಜೀವ ಕೆ., ಶಶಿಕಲಾ ದೇವಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು. ರಥಶಿಲ್ಪಿ ಪರವಾಗಿ ಶಂಕರ ಆಚಾರ್ಯ, ಶಿಲಾ ಶಿಲ್ಪಿ, ಸಿಮೆಂಟ್ ಡಿಸೈನ್ ಅವರಿಗೆ ಪ್ರಸಾದ ಗೌರವಿಸಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net