ಶ್ರೀನಿವಾಸ ಕಲ್ಯಾಣದಿಂದ ಧರ್ಮ ಜಾಗೃತಿ

kalyana
Published on

ಕೋಟ: ಸಮಾಜದಲ್ಲಿ ಆಗಾಗ ಧಾರ್ಮಿಕ ಪ್ರಜ್ಞೆ ಮೂಡಬೇಕಾದರೆ ಶ್ರೀನಿವಾಸ ಕಲ್ಯಾಣದಂತಹ ಕಾರ್ಯಕ್ರಮ ಕಾಲಕಾಲಕ್ಕೆ ಆಯೋಜನೆಗೊಳ್ಳಬೇಕು, ತನ್ಮೂಲಕ ಧರ್ಮ ಜಾಗೃತಿ ಸಾಧ್ಯ ಎಂದು ಸಮಿತಿ ಮಾರ್ಗದರ್ಶಕ ಡಾ.ವಿದ್ವಾನ್ ವಿಜಯ್ ಮಂಜರ್ ಹೇಳಿದರು.

ಸಾಸ್ತಾನದ ಕಾರ್ತಿಕ್ ಎಸ್ಟೇಟ್‌ನಲ್ಲಿ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

ಸನಾತನ ಹಿಂದು ಧರ್ಮ ವಿಶ್ವದಲ್ಲೇ ಶ್ರೇಷ್ಠ ಧರ್ಮ. ಇಲ್ಲಿ ನಾನಾ ರೀತಿಯ ಧಾರ್ಮಿಕ ಕೈಂಕರ್ಯಕ್ಕೆ ವೇದಿಕೆ ದೊರಯುತ್ತದೆ, ಆದರೆ ಅದು ನಿತ್ಯ ನಿರಂತರವಾಗಿ ಕೈಗೊಂಡಾಗ ಮಾತ್ರ ಧರ್ಮದ ತಳಹದಿ ಗಟ್ಟಿಗೊಳ್ಳಲಿದೆ ಎಂದರು.

ಸಮಿತಿ ಅಧ್ಯಕ್ಷ ಎಂ.ಸಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಮೊಳಹಳ್ಳಿ ದಿನೇಶ್ ಹೆಗ್ಡೆ, ಸಾಲಿಗ್ರಾಮ ಪಪಂ ಅಧ್ಯಕ್ಷೆ ಸುಕನ್ಯಾ ಶೆಟ್ಟಿ, ಪಾಂಡೇಶ್ವರ ಗ್ರಾಪಂ ಅಧ್ಯಕ್ಷೆ ಸುಶೀಲಾ ಸದಾನಂದ ಪೂಜಾರಿ, ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್, ಕೋಡಿ ಗ್ರಾಪಂ ಅಧ್ಯಕ್ಷೆ ಗೀತಾ ಕಾರ್ವಿ, ಕೋಟ ಗ್ರಾಪಂ ಅಧ್ಯಕ್ಷೆ ಜ್ಯೋತಿ ಬಿ.ಶೆಟ್ಟಿ, ಐರೋಡಿ ಗ್ರಾಪಂ ಅಧ್ಯಕ್ಷೆ ಸಕು, ಕೋಟ ಅಮೃತೇಶ್ವರಿ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ.ಕುಂದರ್, ಕಾರ್ತಿಕ್ ಎಸ್ಟೇಟ್ ಮಾಲೀಕರಾದ ಸುರೇಶ್ ಬೆಟ್ಟಿನ್, ಚಂದ್ರಶೇಖರ್ ಕಲ್ಪತರು ಉಪಸ್ಥಿತರಿದ್ದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಸಮಿತಿ ಸಾಂಸ್ಕೃತಿಕ ವಿಭಾಗದ ನರೇಂದ್ರ ಕುಮಾರ್ ಕೋಟ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಗಾಯಕ ಜಗದೀಶ್ ಆಚಾರ್ ಪುತ್ತೂರು ಹಾಗೂ ದಾಸಸಾಹಿತ್ಯ ಮೈಸೂರು ರಾಮಚಂದ್ರ ಆಚಾರ್ಯ ಅವರಿಂದ ಭಜನಾಮೃತ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net