ಎಚ್‌ಜೆಸಿ ಕ್ರಿಕೆಟ್ ಕ್ಯಾಂಪ್‌ಗೆ ಚಾಲನೆ

hjc
Published on

ಶಿರ್ವ: ಹಿಂದು ಜೂನಿಯರ್ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಪ್ರಾಯೋಜಕತ್ವದ ಎಚ್‌ಜೆಸಿ ಕ್ರಿಕೆಟ್ ಅಕಾಡೆಮಿಯ ಸಮ್ಮರ್ ಕ್ಯಾಂಪ್-2025ರ ಉದ್ಘಾಟನೆ ಹಾಗೂ ಶಿಬಿರಾರ್ಥಿಗಳ ಜೆರ್ಸಿ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ನಿವೃತ್ತ ಪ್ರಾಂಶುಪಾಲ ರಾಜಗೋಪಾಲ್ ಕೆ. ಶುಭಹಾರೈಸಿದರು. ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿಗಾರ್, ಗೌರವ ಸಲಹೆಗಾರ ಕುತ್ಯಾರು ಕಿಶೋರ್‌ಕುಮಾರ್ ಶೆಟ್ಟಿ, ಹಿರಿಯ ಕ್ರಿಕೆಟಿಗ ಶ್ರೀಧರ್ ಶೆಟ್ಟಿ, ಯಾದವ್ ನಾಯ್ಕ, ರಮೇಶ್ ಸೇರಿಗಾರ್, ತರಬೇತುದಾರ ಮೊಹಮ್ಮದ್ ಇಬ್ರಾಹಿಂ ಆತ್ರಾಡಿ, ಸಹಾಯಕ ತರಬೇತುದಾರ ಶೇಖರ್, ಸಂಘದ ಪದಾಧಿಕಾರಿ ಸದಾನಂದ ಕೆ.ಶೆಟ್ಟಿ, ಸಚ್ಚಿದಾನಂದ ಹೆಗ್ಡೆ, ಕುತ್ಯಾರು ಪ್ರಸಾದ್ ಶೆಟ್ಟಿ, ನವೀನ್ ಶೆಟ್ಟಿ, ಶಬರಿ ರಾಜೇಶ್ ಶೆಟ್ಟಿ, ಮನೋಜ್ ಕುಮಾರ್ ಶೆಟ್ಟಿ, ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು, ನಿಶಾಂತ್ ನೊರೋನ್ಹಾ ರಂಗನಪಲ್ಕೆ ಉಪಸ್ಥಿತರಿದ್ದರು. ಮುಖ್ಯ ತರಬೇತುದಾರ ಸದಾನಂದ ಶಿರ್ವ ಕಾರ್ಯಕ್ರಮ ನಿರೂಪಿಸಿದರು. ತರಬೇತಿಗೆ ಸೇರಬಯಸುವ ಶಿಬಿರಾರ್ಥಿ ಮಾಹಿಗಾಗಿ (99725 81234) ಸಂಖ್ಯೆ ಸಂಪರ್ಕಿಸಬಹುದು ಎಂದು ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net