ಧರ್ಮದ ತಳಹದಿ ತಿಳಿಯದಿದ್ದರೆ ಬದುಕು ಅತಂತ್ರ

233
Published on

ಚನ್ನಗಿರಿ: ಒಂದೇ ಧರ್ಮದ ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬಹು ದೇವೋಪಾಸಕರಾಗಲು ಸಾಧ್ಯವಿಲ್ಲ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ.ಶ್ರೀ ಗುರುಬಸವ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ಸೋಮವಾರ ಏರ್ಪಡಿಸಿದ್ದ 863 ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಶರಣ ಮಡಿವಾಳ ಮಾಚಿದೇವರ ಸ್ಮರಣೋತ್ಸವದಲ್ಲಿ ಮಾತನಾಡಿದರು.

ಧರ್ಮದ ತಳಹದಿ ತಿಳಿಯದೇ ಅತಂತ್ರರಾಗಬಾರದು. ಮಡಿವಾಳ ಮಾಚಿದೇವರ ವಚನಗಳು 64 ವಿದ್ಯೆ ಒಳಗೊಂಡಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸಂಸ್ಕಾರ ತಾನಾಗಿಯೇ ಬರಲಿದೆ ಎಂದರು.

ಮಾತು ಮಾಣಿಕ್ಯದಂತೆ ಇರಬೇಕು ಎಂಬುದು ಮಾಚಿದೇವರ ಉದ್ದೇಶವಾಗಿತ್ತು. ಬಸವೇಶ್ವರರು ಹೇಳಿದಂತೆ ನಾವು ಜಾತಿ ಸೂಚಕರಾಗದೆ ಜ್ಯೋತಿಯ ಸೂಚಕರಾಗಿರಬೇಕು ಎಂದು ತಿಳಿಸಿದರು.

ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿ, ಬಸವಾದಿ ಶರಣರು ಸಮಾಜ, ಜನರನ್ನು ತಿದ್ದಿ ಸರಿದಾರಿಗೆ ತರುವ ಕೆಲಸ ಮಾಡಿದರು. ವಿರಕ್ತ ಧರ್ಮವನ್ನು ಪಾಲಿಸುತ್ತಾ ಸಮಾಜದಲ್ಲಿ ಸಾಗಬೇಕಿದೆ. ಆಧುನಿಕ ತಲ್ಲಣಗಳಿಂದ ಧರ್ಮದ ತತ್ವಗಳು ಮೊಟಕುಗೊಳ್ಳದಂತೆ ಎಚ್ಚರವಹಿಸಬೇಕಿದೆ ಎಂದರು.

ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಿದ್ದನಮಠ ಯುಗಧರ್ಮ ರಾಮಣ್ಣ, ಶಿಕ್ಷಕಿ ಶಬ್ರೀನಾ ಮಹಮ್ಮದ್ ಅಲಿ, ಡಾ.ಇಂಚರ, ಡಿವೈಎಸ್‌ಪಿ ರುದ್ರೇಶ್ ಎಸ್.ಉಜ್ಜಿನಕೊಪ್ಪ, ಈರೇಶ್, ಮಂಜುಳಮ್ಮ, ರಾಜಪ್ಪ, ಎಸ್.ಆರ್.ಕುಮಾರ್, ಡಾ.ರಾಜು, ಎಂ.ಯು.ಚನ್ನಬಸಪ್ಪ, ಎಂ.ಬಿ.ನಾಗರಾಜ್, ಧನಂಜಯ್, ಚಂದ್ರಪ್ಪ, ಜಿ.ಎಸ್.ಶಿವಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net