ಧರ್ಮ, ಸಂಸ್ಕೃತಿ ಉಳಿಸುವ ಗಟ್ಟಿತನ ತೋರಿಸಿ

27-msk-1
Published on

ಮಸ್ಕಿ: ದೇವರು ಮತ್ತು ಧರ್ಮದಲ್ಲಿ ಶ್ರದ್ಧೆ, ನಂಬಿಕೆ ಇಟ್ಟರೆ ಬೇಡಿದ್ದು ಪ್ರಾಪ್ತಿಯಾಗಲಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಆಯೋಜಿಸಿದ್ದ ಧರ್ಮಸಭೆ ಹಾಗೂ ಭ್ರಮರಾಂಬ ದೇವಿಸಹಿತ ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ದರ್ಶನ ಗ್ರಂಥ ಬಿಡುಗಡೆ ಮಾಡಿ ಗುರುವಾರ ಆಶೀವರ್ಚನ ನೀಡಿದರು. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಎತ್ತರದ ಸ್ಥಾನ ನೀಡಿದ್ದಲ್ಲದೆ ಮಾತೃ ಸ್ವರೂಪಳಾಗಿ ಗೌರವಿಸಲಾಗುತ್ತದೆ. ಮಹಿಳೆಯರಲ್ಲಿ ತಾಳ್ಮೆ ಅಧಿಕವಾಗಿದ್ದು, ಕೌಟುಂಬಿಕ ಸಂಬಂಧಗಳು ಶಿಥಿಲವಾಗದಂತೆ ನೋಡಿಕೊಳ್ಳುವ ಬಹುದೊಡ್ಡ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದರು.

ಸಮಾಜದಲ್ಲಿ ಮಹಿಳೆಯರ ಸಂಖ್ಯೆ ಕ್ಷೀಣಿಸುತ್ತಿದ್ದು, ಹೆಣ್ಣು ಭ್ರೂಣ ಹತ್ಯೆ ಸರಿಯಲ್ಲ. ಮಹಿಳೆಯರು ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸುವ ಗಟ್ಟಿತನ ಮೆರೆಯಬೇಕಾಗಿದೆ ಎಂದು ಜಗದ್ಗುರುಗಳು ತಿಳಿಸಿದರು. ಪ್ರಮುಖ ಗ್ರಂಥ ದಾನಿ ಪ್ರಕಾಶ ಧಾರಿವಾಲ ಕುಟುಂಬವನ್ನು ಜಗದ್ಗುರುಗಳು ಗೌರವಿಸಿದರು.
ಮಾಜಿ ಸಚಿವ ಅಮರೇಗೌಡ ಬಯ್ಯಪುರ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಲೇಖಕ ಪಂಪಯ್ಯಸ್ವಾಮಿ ಸಾಲಿಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net