6 ಕುಟುಂಬಗಳಿಗೆ ಪರಿಹಾರ ವಿತರಣೆ

6 ಕುಟುಂಬಗಳಿಗೆ ಪರಿಹಾರ ವಿತರಣೆ
Published on

ಸಕಲೇಶಪುರ: ಎತ್ತಿನಹೊಳೆ ಯೋಜನೆಯಿಂದ ಭೂಮಿ ಕಳೆದುಕೊಂಡು ದಾಖಲೆ ಹೊಂದಿಸಲು ಸಾಧ್ಯವಾಗದೆ ಪರಿಹಾರದಿಂದ ವಂಚಿತರಾಗಿದ್ದ 6 ಕುಟುಂಬಗಳಿಗೆ ಶಾಸಕ ಸಿಮೆಂಟ್ ಮಂಜು ಮುತುವರ್ಜಿಯಿಂದ ಪರಿಹಾರ ಹೊರಕಿದೆ.

ತಾಲೂಕಿನ ಹೆಗ್ಗದ್ದೆ ಗ್ರಾಮದ 6 ಕುಟುಂಬಗಳ 2 ಎಕರೆ ಜಮೀನು ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗಾಗಿ ವಶಪಡಿಸಿಕೊಳ್ಳಲಾಗಿತ್ತು. ಆದರೆ, ಪರಿಹಾರ ಪಡೆಯಲು ಸರ್ಕಾರಿ ಕಚೇರಿಗಳಿಂದ ಸಮರ್ಪಕ ದಾಖಲೆ ಪಡೆಯಲು ವಿಫಲರಾಗಿದ್ದ ಕಾರಣ ಕಳೆದ ಆರು ವರ್ಷದಿಂದ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳನ್ನು ಅಲೆಯುತ್ತಿದ್ದರು. ಶಾಸಕ ಸಿಮೆಂಟ್ ಮಂಜು ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಒಪ್ಪಿಗೆ ಪಡೆದು 22.6 ಲಕ್ಷ ರೂ. ಪರಿಹಾರದ ಚೆಕ್ ಅನ್ನು ಶನಿವಾರ ವಿತರಿಸಲು ಯಶಸ್ವಿಯಾದರು. ವಿಶ್ವೇಶ್ವರಯ್ಯ ಜಲನಿಗಮದ ಇಇ ವೆಂಕಟೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net