ಲಾಕ್​ಡೌನ್ ವೇಳೆ ಸೀಜ್ ಆದ ವಾಹನಗಳ ರಿಲೀಸ್ ಪ್ರಕ್ರಿಯೆ ಶುರು

Vehicles_Seized_by_SJ_Park_PS 29 APR 20
Published on

ಬೆಂಗಳೂರು : ಲಾಕ್​ಡೌನ್ ವೇಳೆ ಸೀಜ್ ಆದ ವಾಹನಗಳಿಗೆ ಇದೀಗ ರಿಲೀಸ್ ಆಗೋ ಯೋಗ ಬಂದಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ, ಪೊಲೀಸರು, ದಂಡ ಕಟ್ಟಿಸಿಕೊಂಡು ವಾಹನಗಳನ್ನು ರಿಲೀಸ್ ಮಾಡಲು ಆರಂಭಿಸಿದ್ದಾರೆ. ತಮ್ಮ ವಾಹನಗಳನ್ನು ಬಿಡಿಸಿಕೊಳ್ಳಲು ಜನರು ದಂಡುದಂಡಾಗಿ ಬರುತ್ತಿದ್ದಾರೆ.

ಸೀಜ್ ಆಗಿದ್ದ ವಾಹನಗಳು ರಿಲೀಸ್ ಆಗ್ಬೇಕಂದ್ರೆ ಹಳೇ ಕೇಸ್ ಕ್ಲಿಯರ್ ಮಾಡಲೇಬೇಕು. ಹಳೇ ಕೇಸಿನ ಫೈನ್ ಜೊತೆಗೆ ಲಾಕ್ಡೌನ್ ನಿಯಮ ಉಲ್ಲಂಘನೆಯ 500 ರೂ. ದಂಡವನ್ನೂ ಕಟ್ಟುವುದು ಕಡ್ಡಾಯ. ವಾಹನವನ್ನು ಬಿಡಿಸಿಕೊಳ್ಳಲು 100 ರೂ. ಬಾಂಡ್ ಪೇಪರ್, ಆಧಾರ್ ಕಾರ್ಡ್, ಡಿಎಲ್ ಮತ್ತು ಆರ್​​ಸಿ ದಾಖಲೆ ಜೆರಾಕ್ಸ್ ಮತ್ತು ಒಂದು ಫೋಟೊವನ್ನು ಕಡ್ಡಾಯವಾಗಿ ಒಯ್ಯಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಾಕ್ಡೌನ್ ಸಮಯದಲ್ಲಿ ಬೆಂಗಳೂರಿನಲ್ಲಿ ಒಟ್ಟು 36 ಸಾವಿರಕ್ಕೂ ಅಧಿಕ ವಾಹನಗಳು ಸೀಜ್ ಆಗಿದ್ದವು. ಇದೀಗ ನಗರದ ಎಲ್ಲಾ ಠಾಣಾ ವ್ಯಾಪ್ತಿಗಳಲ್ಲಿ ರಿಲೀಸ್​ ಪ್ರಕ್ರಿಯೆ ಶುರುವಾಗಿದೆ. ದಂಡದ ಮೊತ್ತದೊಂದಿಗೆ ಹಲವೆಡೆ ಪ್ರೈವೇಟ್ ಪಾರ್ಕಿಂಗ್ ಚಾರ್ಜ್ ಕೂಡ ಅಪ್ಲೈ ಮಾಡಲಾಗುವುದು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net