

ಬೆಂಗಳೂರು : ನ.24 ಭಾನುವಾರ ವೇದಬ್ರಹ್ಮಕೆ.ಜಿ. ಸುಬ್ರಾಯ ಶರ್ಮರ 175ನೇ ವೇದಾಂತ ಕನ್ನಡ ಕೃತಿರತ್ನ ‘ಸರ್ವಂ ದ್ವಂದ್ವಾತ್ಮಕಂ ಜಗತ್’ ಕೃತಿ ಲೋಕಾರ್ಪಣೆ ಸಮಾರಂಭ ನಡೆಯಲಿದೆ.
ಬಸವನಗುಡಿಯ ಸಾಕಮ್ಮ ಗಾರ್ಡನ್ಸ್ನಲ್ಲಿರುವ ವೇದಾಂತ ನಿಲಯದಲ್ಲಿ ಬೆಳಿಗ್ಗೆ 9ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಗಣೇಶ ಕುಮಾರ್ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಛಾಯಾಪತಿ, ನಾಡಿಗ್ ಬನ ದತ್ತಾತ್ರೇಯ, ವೈದ್ಯನಾಥನ್ ಡಾ. ಕೆ.ಜಿ. ಸುಬ್ರಾಯ ಶರ್ಮಾ ದಂಪತಿಗಳು ಪಾಲ್ಗೊಳ್ಳಲಿದ್ದಾರೆ.