ಸಮುದಾಯ ಜನರಿಗೆ ಸಂವಿಧಾನ ಬದ್ಧ ಹಕ್ಕು

invitation
ನಾಡ (ಪಡುಕೋಣೆ) ಶಾಖೆ ಪುನಃ ರಚನೆ, ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಜನಶಕ್ತಿ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.
Published on

ಗಂಗೊಳ್ಳಿ: ಸಂವಿಧಾನ ಬದ್ಧ ಹಕ್ಕನ್ನು ಸಮುದಾಯ ಜನರಿಗೆ ಒದಗಿಸಿ ಕೊಡುವ ನಿಟ್ಟಿನಲ್ಲಿ ಹಾಗೂ ನೈತಿಕ ಸ್ಥೈರ್ಯ ತುಂಬುವ ದೃಷ್ಟಿಯಿಂದ ಜನಶಕ್ತಿ ಸಮಾವೇಶವನ್ನು ನಾಡದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಕೀಲ ಮಂಜುನಾಥ ಗಿಳಿಯಾರ್ ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ವತಿಯಿಂದ ನ.3ರಂದು ನಾಡ ಗ್ರಾಪಂ ಸಭಾಭವನದಲ್ಲಿ ನಡೆಯಲಿರುವ ನಾಡ (ಪಡುಕೋಣೆ) ಶಾಖೆ ಪುನಃ ರಚನೆ, ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಜನಶಕ್ತಿ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಸೋಮವಾರ ಮಾತನಾಡಿದರು.

ಜಿಲ್ಲಾ ಸಂಘಟನಾ ಸಂಚಾಲಕ ಸುರೇಶ ಹಕ್ಲಾಡಿ, ತಾಲೂಕು ಸಂಚಾಲಕ ಸತೀಶ ಕೆ.ರಾಮನಗರ, ಬೈಂದೂರು ತಾಲೂಕು ಸಂಘಟನಾ ಸಂಚಾಲಕ ರಮೇಶ, ಸಂಯೋಚಿತ ಸಂಚಾಲಕ ಪ್ರದೀಪ ಜಿ.ಪಿ., ಸಂಚಾಲಕ ಸುರೇಶ, ಪ್ರಶಾಂತ, ಕೃಷ್ಣ, ರಾಮಕೃಷ್ಣ, ರಾಘವೇಂದ್ರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net