

ಬಂಟ್ವಾಳ: ತಾಲೂಕಿನ ಕಳ್ಳಿಗೆ ಗ್ರಾಮದ ಕಳ್ಳಿಗೆಗುತ್ತು ಚಾವಡಿಯಲ್ಲಿ ಜ.31ರಂದು ನಡೆಯಲಿರುವ ಶ್ರೀ ಕನಪಾಡಿತ್ತಾಯ, ಧೂವಾವತಿ ಬಂಟ ಹಾಗೂ ಪರಿವಾರ ದೈವಗಳ ಧರ್ಮನೇಮದ ಆಮಂತ್ರಣ ಪತ್ರ ಬಿಡುಗಡೆಯು ಕನಪಾಡಿ ಕ್ಷೇತ್ರದಲ್ಲಿ ನಡೆಯಿತು.
ವಾಜಿ ಸಚಿವ ಬಿ.ರವಾನಾಥ ರೈ ಆಮಂತ್ರಣಪತ್ರ ಬಿಡುಗಡೆಗೊಳಿಸಿದರು. ಕಳ್ಳಿಗೆಗುತ್ತು ರಾಜಶೇಖರ ರೈ, ಕನಪಾಡಿ ಕ್ಷೇತ್ರದ ಹದಿನಾರುಗುತ್ತು ಮನೆತನದವರು, ಜಿ.ಪಂ.ವಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಮೊದಲಾದವರಿದ್ದರು.
ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ವಿಧಿವಿಧಾನಗಳು ನಡೆಯಲಿದ್ದು, ಬಳಿಕ ಪೆರಿಯೋಡಿಬೀಡಿನಿಂದ ಕಳ್ಳಿಗೆ ಗುತ್ತಿಗೆ ದೈವಗಳ ಭಂಡಾರ ಹೊರಡಲಿದ್ದು, ನಂತರ ಕಳ್ಳಿಗೆಗುತ್ತು ಚಾವಡಿಯಲ್ಲಿ ಶ್ರೀಕನಪಾಡಿತ್ತಾಯ, ಧೂವಾವತಿ ಬಂಟ ಹಾಗೂ ಪರಿವಾರ ದೈವಗಳಿಗೆ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಕಳ್ಳಿಗೆ ಚಾವಡಿಯಿಂದ ದೈವಗಳ ಭಂಡಾರ ನೇಮ ಚಪ್ಪರಕ್ಕೆ ಆಗಮಿಸಲಿದೆ. ರಾತ್ರಿ 8 ಗಂಟೆಗೆ ಧರ್ಮನೇಮದ ಗಗ್ಗರ ಸೇವೆ ನಡೆಯಲಿದೆ. ಫೆ.1ರಂದು ಕಳ್ಳಿಗೆಗುತ್ತು ಮನೆಯ ಪರಿವಾರ ದೈವಗಳಿಗೆ ಕೋಲ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.