ಅಧಿಕಾರಿಗಳು, ವಿಸಿಗಳ ಜಾತಿ ಮಾಹಿತಿ ಬಿಡುಗಡೆ!

vidhanasoudha
Published on

ಬೆಂಗಳೂರು: ಪಕ್ಷದ ನಾಯಕರೇ ಲಿಂಗಾಯತ ಅಧಿಕಾರಿಗಳನ್ನು ಸರ್ಕಾರದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಚರ್ಚೆ ಮುಂದೆ ಮಾಡುತ್ತಿದ್ದಂತೆ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ, ಐಪಿಎಸ್, ಐಎಎಸ್, ಉಪ ವಿಭಾಗಾಧಿಕಾರಿಗಳ ಜಾತಿ ಮಾಹಿತಿ ಇರುವ ಪಟ್ಟಿ ಸಿಎಂ ಕಚೇರಿಯಿಂದ ಬಿಡುಗಡೆಯಾಗಿದೆ.

ತಿಂಗಳ ಹಿಂದಷ್ಟೇ ಬಿಜೆಪಿ ನಾಯಕ ಬಿ.ವೈ ವಿಜಯೇಂದ್ರ ತಮ್ಮ ಸಮಾಜದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದರು. ಬಳಿಕ ಗುಸುಗುಸು ಚರ್ಚೆ ನಡೆದೇ ಇತ್ತು. ಎರಡು ದಿನಗಳ ಹಿಂದೆ ಕಾಂಗ್ರೆಸ್‌ನ ಹಿರಿಯ ಶಾಸಕರ ಶಾಮನೂರು ಶಿವಶಂಕರಪ್ಪ ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಂತೆ ವ್ಯಾಪಕ ಚರ್ಚೆ ಆರಂಭವಾಗಿದೆ.

ಪಟ್ಟಿ ಬಿಡುಗಡೆ

ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಜಾತಿವಾರು ಪಟ್ಟಿ ಬಿಡುಗಡೆಯಾಗಿದೆ. ಹಾಗೆಯೇ ಕುಲಪತಿಗಳ ಜಾತಿವಾರು ಲೆಕ್ಕವನ್ನು ಹೊರಗೆಡಹಿದೆ. ಅದರ ಪ್ರಕಾರ 13 ಮಂದಿ ಲಿಂಗಾಯತರಿದ್ದರೆ, 8 ಒಕ್ಕಲಿಗರು, 8 ಮಂದಿ ಸಾಮಾನ್ಯ ಹಾಗೂ ಬ್ರಾಹ್ಮಣ, ಆರು ಒಬಿಸಿ, ಐದು ಎಸ್ಸಿ, 1 ಎಸ್ಟಿ ಸೇರಿ ಒಟ್ಟು 41 ಮಂದಿ ಇದ್ದಾರೆ. ಒಬ್ಬರೂ ಮುಸ್ಲಿಮರಿಲ್ಲ ಎಂಬ ಮಾಹಿತಿ ಅದರಲ್ಲಿದೆ.
31 ಜಿಲ್ಲೆಗಳ ಜಿಪಂ ಸಿಇಒಗಳು, 47 ಐಪಿಎಸ್ ಅಧಿಕಾರಿಗಳು, 53 ಎಸಿಗಳು ಹಾಗೂ 31 ಡಿಸಿಗಳ ಜಾತಿ ಮಾಹಿತಿ ಈ ಪಟ್ಟಿಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net