ರೆಖ್ಯ ಹೆದ್ದಾರಿ ಕಾಮಗಾರಿ ಕಳಪೆ : ಗ್ರಾಮಸ್ಥರ ಅಸಮಾಧಾನ : ಜು.31ರಂದು ಪ್ರತಿಭಟನೆಗೆ ಸಿದ್ಧತೆ

New Project (16)
Published on

ಕೊಕ್ಕಡ: ರೆಖ್ಯ ಗ್ರಾಮದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ (75) ರ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದ್ದು, ಆದರೆ ಅವು ಕಳಪೆ ಹಾಗೂ ಅವೈಜ್ಞಾನಿಕವಾಗಿವೆ ಎಂದು ರೆಖ್ಯ ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.

ಶನಿವಾರ ಆಯೋಜಸಿದ್ದ ಪ್ರತಿಭಟನಾ ಸಭೆಯಲ್ಲಿ ಎಂಜಿರ, ನೇಲ್ಯಡ್ಕ, ಪರಕ್ಕಳದ ಕಳಪೆ ಕಾಮಗಾರಿ ವಿಚಾರ ಮುನ್ನೆಲೆಗೆ ಬಂದಿದ್ದು, ಎಂಜಿರದಲ್ಲಿ ಸರ್ವಿಸ್ ರಸ್ತೆ ನಿರ್ಮಿಸಿಲ್ಲ. ಕೋಳಾರು ಸಂಪರ್ಕ ರಸ್ತೆಗೆ ನೇಲ್ಯಡ್ಕದಲ್ಲಿ ಸಂಪರ್ಕ ನೀಡಿಲ್ಲ. ಅಗತ್ಯವಿದ್ದಲ್ಲಿ ದಾರಿದೀಪ ಅಳವಡಿಸದೇ ಇದ್ದು, ಅನವಶ್ಯ ಸ್ಥಳಗಳಲ್ಲಿ ಬಸ್ ತಂಗುದಾಣ ನಿರ್ಮಿಸಲಾಗಿದೆ. ಅಪಾಯವಿರುವಲ್ಲಿ ತಡೆಗೋಡೆ ಕೂಡ ನಿರ್ಮಾಣವಾಗಿಲ್ಲ. ಈ ಕುರಿತು ಯಾವುದೇ ಜನಪ್ರತಿನಿಧಿಗಳು ಇದುವರೆಗೆ ಗಮನ ಹರಿಸದೇ ಇದ್ದು, ಜು.31ರಂದು ರಾಷ್ಟ್ರೀಯ ಹೆದ್ದಾರಿ ಜಂಕ್ಷನ್‌ನಲ್ಲಿ ಸ್ಥಳೀಯ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಬೃಹತ್ ಪ್ರತಿಭಟನೆ ನಡೆಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net