

ಸಿದ್ದಾಪುರ: ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ರೆಜಿತ್ ಕುಮಾರ್ ಗುಹ್ಯ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎ.ಎಸ್. ಮುಸ್ತಫ ಅವಿರೋಧವಾಗಿ ಆಯ್ಕೆಯಾದರು.
2025-28ನೇ ಸಾಲಿನ ಆಡಳಿತ ಮಂಡಳಿಗೆ ವಿರಾಜಪೇಟೆ ಪ್ರೆಸ್ ಕ್ಲಬ್ ಕಚೇರಿಯಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಪುತ್ತಂ ಪ್ರದೀಪ್, ಖಜಾಂಚಿಯಾಗಿ ಹೇಮಂತ್ ಕುಮಾರ್ ಎಂ.ಎನ್. ನಿರ್ದೇಶಕರಾಗಿ ಕಿಶೋರ್ ಕುಮಾರ್ ಶೆಟ್ಟಿ, ಕೋಲತಂಡ ರಘು ಮಾಚಯ್ಯ ಆಯ್ಕೆಯಾದರು.
ಚುನಾವಣಾಧಿಕಾರಿ ಜಿಮ್ಮಿ ಸಿಕ್ವೇರಾ, ಜಿಲ್ಲಾ ವೀಕ್ಷಕರಾದ ಎಂ.ಎನ್ ಚಂದ್ರಮೋಹನ್, ಪ್ರಮುಖರಾದ ನಾಗರಾಜ್ ಶೆಟ್ಟಿ, ಪಾರ್ಥ ಚಿಣ್ಣಪ್ಪ, ಡಿ.ಮಂಜುನಾಥ್, ಕಾಂಗಿರ ಬೋಪಣ್ಣ, ತೇಜಸ್ ಪಾಪಯ್ಯ, ಇಸ್ಮಾಯಿಲ್ ಕಂಡಕ್ಕರೆ, ಎ.ಎನ್.ವಾಸು, ನೌಫಲ್ ಕಡಂಗ, ಕೃಷ್ಣ, ಅಂತೋಣಿ ಇತರರಿದ್ದರು.