ಟ್ಯಾಟೂ ಸ್ಟುಡಿಯೋಗಳಿಗೆ ನಿಯಮ

Tattoo
Published on

ಬೆಂಗಳೂರು: ಟ್ಯಾಟೂ ಕಲಾವಿದರು ಮತ್ತು ಟ್ಯಾಟೂ ಸ್ಟುಡಿಯೋಗಳಿಗೆ ಪರವಾನಗಿ ನೀಡಲು ಮಾನದಂಡಗಳು ಸೇರಿ ಟ್ಯಾಟೂ ಹಾಕುವ ಕಾರ್ಯವಿಧಾನಗಳನ್ನು ನಿರ್ದಿಷ್ಟಪಡಿಸುವ ನಿಯಮಗಳನ್ನು ಜಾರಿಗೆ ತರುವಂತೆ ಕೋರಿ ರಾಜ್ಯ ಆರೋಗ್ಯ ಇಲಾಖೆ ಶೀಘ್ರದಲ್ಲೇ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆಯಲಿದೆ.

ಈ ಕುರಿತು ಮಾಹಿತಿ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸೌಂದರ್ಯವರ್ಧಕಗಳು. ಟ್ಯಾಟೂ ಹಾಕಲು ಬಳಸಲಾಗುವ ಟ್ಯಾಟೂ ಶಾಯಿಯಲ್ಲಿ ಬಳಸಲಾಗುವ ರಾಸಾಯನಿಕ ಅಂಶಗಳಿಂದ ಟ್ಯಾಟೂ ಹಾಕಿಕೊಳ್ಳುವವರ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಕರ್ನಾಟಕದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಅಧಿಕಾರಿಗಳು ರಾಜ್ಯಾದ್ಯಂತ ಸಂಗ್ರಹಿಸಿದ ಹಚ್ಚೆ ಶಾಯಿ ಮಾದರಿಗಳ ವಿಶ್ಲೇಷಣಾ ವರದಿಯಲ್ಲಿ ಆತಂಕಕಾರಿ ಫಲಿತಾಂಶ ಬಹಿರಂಗಗೊಂಡಿದೆ ಎಂದು ತಿಳಿಸಿದ್ದಾರೆ.

ಭಾರತೀಯ ಮಾನದಂಡಗಳ ಬ್ಯೂರೋ (ಬಿಐಎಸ್) ಮಾನದಂಡಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸಬೇಕು. ಈ ಸಂಬಂಧ ಶೀಘ್ರವೇ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದು ಒತ್ತಾಯಿಸಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net