

ಹಿರೇಕೆರೂರ: ತಾಲೂಕಿನಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಉಲ್ಲಂಘನೆ ಕಂಡುಬಂದಲ್ಲಿ ಚುನಾವಣೆ ಆಯೋಗದ ನಿರ್ದೇಶನದಂತೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ತಹಸೀಲ್ದಾರ್ ರಿಯಾಜುದ್ದಿನ್ ಬಾಗವಾನ್ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ಇತ್ತೀಚೆಗೆ ಆಯೋಜಿಸಿದ್ದ ಎಂಸಿಸಿ ಹಾಗೂ ಸೆಕ್ಟರ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಪಂ ಚುನಾವಣೆ ಮೊದಲನೇ ಹಂತದಲ್ಲಿ ನಡೆಯಲಿದೆ. ತಾಲೂಕಾಡಳಿತ ಹಾಗೂ ಚುನಾವಣೆ ಸಿಬ್ಬಂದಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಚುನಾವಣೆ ಕಾರ್ಯ ನಿರ್ವಹಿಸಬೇಕು. ಇದು ಕರೊನಾ ಸಮಯವಾಗಿದ್ದರಿಂದ ಚುನಾವಣೆ ಆಯೋಗ ಹಾಗೂ ಸರ್ಕಾರದ ನಿರ್ದೇಶನ ಕಟ್ಟುನಿಟ್ಟಾಗಿ ಪಾಲಿಸಬೇಕು. ಅಲ್ಲದೆ, ಚುನಾವಣೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಾಗರೂಕತೆಯಿಂದ ಕಾರ್ಯ ನಿರ್ವಹಿಸಬೇಕು. ಯಾರೂ ಮತದಾನದಿಂದ ಹಿಂದೆ ಉಳಿಯದ ರೀತಿಯಲ್ಲಿ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ತಾಲೂಕಿನ ಕಚವಿ ಮತ್ತು ಸಾತೇನಹಳ್ಳಿ ಗ್ರಾಪಂಗೆ ಎಲ್. ಶಿದ್ಲಿಂಗಪ್ಪ ಮೊ. 98406 95249, ಮಡ್ಲೂರ ಹಾಗೂ ಚಿಕ್ಕೋಣತಿ ಗ್ರಾಪಂಗೆ ಮಂಜುನಾಥ ಮೊ. 82779 31841, ಚಿಕ್ಕೇರೂರ ಗ್ರಾಪಂಗೆ ಸಿ.ಎನ್. ರಂಗನಾಥ ಮೊ. 94823 71519, ಹಂಸಭಾವಿ ಗ್ರಾಪಂಗೆ ಮಹ್ಮದ ನದಾಫ್ ಮೊ. 94808 43451, ಚಿನ್ನಮುಳಗುಂದ, ಭೋಗಾವಿ ಮತ್ತು ಸುತ್ತಕೋಟಿ ಗ್ರಾಪಂಗೆ ಬಸವಣ್ಣೆಪ್ಪ ಮೊ. 99451 21801, ಆಲದಗೇರಿ, ಅರಳಿಕಟ್ಟಿ ಹಾಗೂ ಅಬಲೂರ ಗ್ರಾಪಂಗೆ ನವೀನಕುಮಾರ ಮೊ. 76248 66102, ಬೆಟಕೇರೂರ ಹಾಗೂ ಯತ್ತಿನಹಳ್ಳಿಎಂ.ಕೆ ಗ್ರಾಪಂಗೆ ವಿ.ಎಸ್. ಹಿರೇಮಠ ಮೊ. 99458 57257, ಕೋಡ ಹಾಗೂ ತಾವರಗಿ ಗ್ರಾಪಂಗೆ ವಿಷ್ಣುಕಾಂತ ಮೊ. 94490 98548, ಬುರಡಿಕಟ್ಟಿ, ಚನ್ನಳ್ಳಿ ಹಾಗೂ ನಿಡನೇಗಿಲ ಗ್ರಾಪಂಗೆ ಪರಶುರಾಮ ನಾಗರಾಳ ಮೊ. 88672 55827 ಹಾಗೂ ಹಿರೇಕೆರೂರ ತಾಲೂಕು ಎಂಸಿಸಿ ಅಧಿಕಾರಿಯಾಗಿ ವಿ.ಟಿ. ಜಯಕುಮಾರ ಮೊ. 94808 68100 ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ದೂರುಗಳಿಗಾಗಿ ಅವರನ್ನು ಸಂರ್ಪಸಬಹುದಾಗಿದೆ ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಎಂ.ವಿ. ಮಂಜುನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಸಿದ್ದಲಿಂಗಪ್ಪ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಿ.ಎನ್. ರಂಗನಾಥ್, ಮೊಹಮ್ಮದ್ ನದಾಫ್, ವಿ.ಎಸ್. ಹಿರೇಮಠ, ಪರಶುರಾಮ ನಾಗರಾಳ, ಟಿ. ವಿಜಯಕುಮಾರ ಇತರರಿದ್ದರು