ಮಕ್ಕಳಿಗೆ ರೀಲ್ಸ್ ಸ್ಪರ್ಧೆ

Published on

ಕಾಸರಗೋಡು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾಸರಗೋಡು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ‘ಮಕ್ಕಳ ಹಕ್ಕುಗಳ ಸಪ್ತಾಹ-2024’ ರ ಅಂಗವಾಗಿ ಜಿಲ್ಲೆಯ ಹೈಯರ್ ಸೆಕೆಂಡರಿ ಶಾಲಾ ಮಕ್ಕಳಿಗಾಗಿ ರೀಲ್ಸ್ ಸ್ಪರ್ಧೆ ಆಯೋಜಿಸಲಾಗಿದೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಾನಸಿಕ-ದೈಹಿಕ ಹಿಂಸಾಚಾರ ತಡೆಯುವುದು ಹೇಗೆ ಎಂಬ ಬಗ್ಗೆ ಮಕ್ಕಳ ದೃಷ್ಟಿಕೋನ’ ಎಂಬ ವಿಷಯದಲ್ಲಿ ರಿಲ್ಸ್ ಆಯೋಜಿಸಲಾಗಿದೆ.

ಮೊಬೈಲ್ ಫೋನ್ ಮೂಲಕ ಚಿತ್ರೀಕರಿಸಿದ, ಗರಿಷ್ಠ ಮೂರು ನಿಮಿಷಗಳ ರೀಲ್ಸ್ ಸ್ಪರ್ಧೆಗೆ ಕಳುಹಿಸಿಕೊಡಬೇಕಾಗಿದೆ. ಗ್ರಾಫಿಕ್ಸ್‌ನಂಥ ಇತರ ಎಡಿಟಿಂಗ್ ಕೆಲಸಗಳನ್ನು ಕಂಪ್ಯೂಟರ್ ಬಳಸಿ ಮಾಡಬಾರದು. ಹಿನ್ನೆಲೆ ಸಂಗೀತಕ್ಕೆ ಅನುಮತಿಯಿದೆ. ಭಾಗವಹಿಸುವ ಮಕ್ಕಳು ಮೂರು ನಿಮಿಷಕ್ಕೆ ಮೀರದ ರೀಲ್‌ಗಳನ್ನು ಸಿದ್ಧಪಡಿಸಬೇಕು ಮತ್ತು ಅಭ್ಯರ್ಥಿ ಹೆಸರು, ವಿಳಾಸ, ಫೋನ್‌ನಂಬರ್, ಶಾಲೆ ಹೆಸರು ಮತ್ತು ತರಗತಿಯನ್ನೊಳಗೊಂಡಿರುವ ರೀಲ್‌ಗಳನ್ನು ಕಳುಹಿಸಿಕೊಡಬೇಕು. ನ.17 ರೀಲ್‌ಗಳನ್ನು ಸಲ್ಲಿಸಲು ಕೊನೆ ದಿನಾಂಕ, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ(04994 256990) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net