

ಬಳ್ಳಾರಿ: ಸರ್ಕಾರದ ಉನ್ನತ ಸ್ಥಾನದಲ್ಲಿರುವ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿಗೆ ಸಂಸ್ಕೃತಿಯೇ ಇಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ಟೀಕಿಸಿದರು.
ಇದನ್ನೂ ಓದಿ: ಕಳಪೆ ಔಷಧಿಗೆ ಬಾಣಂತಿಯರು ಬಲಿ; ಬಿಜೆಪಿ ಗಂಭೀರ ಆರೋಪ
ನಗರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಸಭೆ ಬಳಿಕ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಯುವಕರು ಮೋದಿ ಎನ್ನುವುದು ದೇಶಾಭಿಮಾನ. ಮೋದಿ ಎಂಬುವರನ್ನು ಹೊಡೆಯಬೇಕೆಂದರೆ ಸಚಿವರೆ ಯುವಕರನ್ನು ಹೊಡೆದು ಹೊಡೆದು ಸುಸ್ತಾಗುತ್ತಾರೆ.
ಶಾಸಕ ಜನಾರ್ದನರೆಡ್ಡಿ ಸಿಬಿಐ ದಾಳಿಗೆ ಭಯಪಟ್ಟು ಬಿಜೆಪಿಗೆ ಸೇರಿದ್ದಾರೆ ಎಂಬುದು ಸುಳ್ಳು. ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಚಿವ ನಾಗೇಂದ್ರ, ಡಿಸಿಎಂ ಶಿವಕುಮಾರ ಮೇಲೆ ಇಡಿ, ಸಿಬಿಐ ಪ್ರಕರಣಗಳು ದಾಖಲಾಗಿಲ್ಲವೇ ಎಂದು ಪ್ರಶ್ನಿಸಿದರು.
ಮಾಜಿ ಸಿಎಂ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಮಾತನಾಡಿದ ಶಾಸಕ ಬಂಡೆ ಸಿದ್ದೇಗೌಡರಿಗೆ ಸಂಸ್ಕಾರ ಇಲ್ಲ ಎಂಬುದು ತೋರಿಸುತ್ತದೆ. ಯಾರ ಆರೋಗ್ಯದ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದು ಕಿಡಿಕಾರಿದರು. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಳ್ಳಾರಿಯನ್ನು ಚಿದ್ರಾ ಮಾಡಲಾಗಿತ್ತು. ಆದ್ದರಿಂದ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯನ್ನು ಗೆಲ್ಲಲು ಹಠಕ್ಕೆ ಬಿದ್ದಿದ್ದಾರೆ.
ಈ ಬಾರಿ ಶ್ರೀರಾಮುಲು ಸೋತರೆ ರಾಜಕೀಯದಿಂದ ದೂರ ಆಗುತ್ತಾರೆ ಎಂಬುದು ವಿರೋಧಿ ನಾಯಕರ ಲೆಕ್ಕಚಾರ. ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡ ವೇಳೆ ಬಿಜೆಪಿ ಗೆದ್ದಿದೆ. ತಳ ಸಮುದಾಯದಿಂದ ಬಂದಿರುವ ವ್ಯಕ್ತಿಗೆ ಬಿಜೆಪಿ ಸಾಕಷ್ಟು ಸ್ಥಾನಮಾನ ನೀಡಿದೆ, ಇದನ್ನು ಕಾಂಗ್ರೆಸ್ ಸಹಿಸಿಕೊಳ್ಳಲು ಆಗುತ್ತಿಲ್ಲ. ನಾನು ಸೋತರೆ ಮನೆಗೆ ಹೋಗಬೇಕು. ನನ್ನ ಎದುರಾಳಿ ಸೋತರೆ ಶಾಸಕರಾಗಿರುತ್ತಾರೆ ಎಂದರು.