ಸಾಧನೆ ಗುರುತಿಸಿ ನೇಮಕ

Published on

ಶ್ರೀನಿವಾಸಪುರ: ಹೈ ಕಮಾಂಡ್​ ಗುರುತಿಸಿ ಪಕ್ಷದ ಜವಾಬ್ದಾರಿ ನೀಡಿದೆ. ಯುವ ಕಾಂಗ್ರೆಸ್​ ಪದಾಧಿಕಾರಿಗಳು ಸಹಕಾರ ನೀಡಿ, ಮುಂದೆ ಸಾಧನೆ ಮಾಡಿದ ನಂತರ ಗೌರವಿಸಿ ಎಂದು ಕೇರಳ ವಾರ್​ರೂಂ ಅಧ್ಯಕ್ಷ ಹರ್ಷ ಕಾನಾದಂ ತಿಳಿಸಿದರು. ಬೆಂಗಳೂರಿನ ಸ್ವಗೃಹದಲ್ಲಿ ಶ್ರೀನಿವಾಸಪುರ ಕ್ಷೇತ್ರದ ಯುವ ಕಾಂಗ್ರೆಸ್​ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದೆಹಲಿ, ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ವೀಕ್ಷಕನಾಗಿ ಹೈಕಮಾಂಡ್​ ನೇಮಕ ಮಾಡಿತ್ತು. ಅಲ್ಲಿ ಕೆಲಸ ಮಾಡಿದ್ದೇನೆ ಹಾಗೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಈಶ್ವರ್​ ಖಂಡ್ರೆ ಅವರ ಮಗನ ಕ್ಷೇತ್ರದಲ್ಲಿ ನನ್ನ ಸಾಧನೆ ಗುರುತಿಸಿ ಈಗ ಕೇರಳದ ವಾರ್​ರೂಂ ಅಧ್ಯಕ್ಷನನ್ನಾಗಿ ನೇಮಕ ಮಾಡಿದೆ. ೆೆಬ್ರವರಿ, ಮಾರ್ಚ್​ನಲ್ಲಿ ಕೇರಳ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಹೆಚ್ಚು ವಿದ್ಯಾವಂತರಿರುವ ಕೇರಳದಲ್ಲಿ ರಾಹುಲ್​ಗಾಂಧಿ ಮತ್ತು ಪ್ರಿಯಾಂಕಾಗಾಂಧಿ ಸಹ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅಲ್ಲಿ ಹೆಚ್ಚು ಸ್ಥಾನಗೆಲ್ಲಲು ಈಗಿನಿಂದಲೇ ಕೆಲಸ ಮಾಡಬೇಕಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net