

ಕಾಸರಗೋಡು: ಜಿಲ್ಲೆಯ ಕೊರಗ ಉನ್ನತಿ(ಕಾಲನಿಗೆ ಸಂವಾದಿ ಪದ) ಭೂಮಿಗಳನ್ನು ಶೀಘ್ರ ಅಳತೆಗೈದು ಭೂದಾಖಲೆಗಳನ್ನು ಹಸ್ತಾಂತರಿಸಲು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಸರ್ವೇ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.
ಕೊರಗ ಉನ್ನತಿಯ ಸಮೀಕ್ಷೆ ಅಂಗವಾಗಿ ಬದಿಯಡ್ಕ ಗ್ರಾಮ ಪಂಚಾಯಿತಿಯ ಪೆರಡಾಲ ಮತ್ತು ಮಾಡತ್ತಡ್ಕ ಉನ್ನತಿಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದರು. ಜಿಲ್ಲೆಯ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ 60 ಕೊರಗ ಶಿಖರಗಳಿವೆ.
ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಶಾಂತಾ, ತಹಸೀಲ್ದಾರ್ ಸಿ.ಅಜಯನ್, ಕಾಸರಗೋಡು ಎಟಿಡಿಒ ಕೆ.ವಿ.ರಾಘವನ್, ಗ್ರಾಮಾಧಿಕಾರಿಗಳು ಮೊದಲಾದವರು ಭಾಗವಹಿಸಿದ್ದರು.