ಹಿಂದುಳಿದ ವರ್ಗಗಳ ಆಯೋಗದ ಅಧಿವೇಶನ

New Project (14)
Published on

ಕಾಸರಗೋಡು: ಕೇರಳ ಹಿಂದುಳಿದ ವರ್ಗಗಳ ಆಯೋಗದ 571ನೇ ಅಧಿವೇಶನ ಕಾಸರಗೋಡು ಅತಿಥಿ ಗೃಹದಲ್ಲಿ ಇತ್ತೀಚೆಗೆ ನಡೆಯಿತು. ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಜಿ.ಶಶಿಧರನ್ ಮತ್ತು ಆಯೋಗದ ಸದಸ್ಯ ಡಾ.ಎ.ವಿ.ಜಾರ್ಜ್ ನಾಲ್ಕು ದೂರುಗಳ ಸಾಕ್ಷ್ಯ ಪಡೆದರು. ಮುಂದಿನ ದಿನಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚಿನ ಸಭೆಗಳನ್ನು ಆಯೋಜಿಸಲಾಗುವುದು ಎಂದು ಆಯೋಗ ಮಾಹಿತಿ ನೀಡಿದೆ. ಆಯೋಗದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net