

ಚನ್ನಪಟ್ಟಣದಲ್ಲಿ ತಿರಂಗಾಯಾತ್ರೆ ಜೋರು
ಚನ್ನಪಟ್ಟಣ: ತಾಲೂಕಿನ ಇತಿಹಾಸದಲ್ಲೇ ಮೊದಲ ಬಾರಿಗೆ 1 ಕಿಮೀ ಉದ್ದದ ತ್ರಿವರ್ಣ ಧ್ವಜದ ಬೃಹತ್ ತಿರಂಗಾಯಾತ್ರೆ ನಗರದಲ್ಲಿ ನಡೆಯಿತು.
ಸ್ವಾತಂತ್ರ್ಯತ್ಸವದ ಪ್ರಯುಕ್ತ ರೋಟರಿ ಟಾಯ್ಸ್ ಸಿಟಿಯಿಂದ ಈ ವಿಶೇಷ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರೊಂದಿಗೆ ಸಂಸ್ಥೆಯ ಸದಸ್ಯರು ಹಾಗೂ ಸಾರ್ವಜನಿಕರು 1000 ಮೀಟರ್ ಉದ್ದದ ತಿರಂಗಾ ಯಾತ್ರೆ ನಡೆಸಿಕೊಟ್ಟರು. ಮೆರವಣಿಗೆಯುದ್ದಕ್ಕೂ ರಾಷ್ಟ್ರಭಿಮಾನ ಮೇಳೈಸಿತು. ಕೋರ್ಟ್ ಆವರಣದಿಂದ ಪ್ರಾರಂಭಗೊಂಡ ಯಾತ್ರೆ ಬೆಂಗಳೂರು&ಮೈಸೂರು ಹೆದ್ದಾರಿಯಲ್ಲಿ ಸಾಗಿ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ಸಾತನೂರು ವೃತ್ತ, ಡಿ.ಟಿ.ರಾಮು ವೃತ್ತ, ಎಂ.ಜಿ.ರಸ್ತೆಯ ಮೂಲಕ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿ ಮುಕ್ತಾಯಗೊಂಡಿತ್ತು.
ತಿರಂಗಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಚನ್ನಪಟ್ಟಣ ಜೆಎಂಎಫ್ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಯೋಗೇಶ್, ದೇಶ ಮತ್ತು ದೇಶಾಭಿಮಾನ ಎದೆಯೊಳಗೆ ಇದ್ದಾಗ ಮಾತ್ರ ಸ್ವಾತಂತ್ರ್ಯ ಎಂಬುದು ಪರಿಪೂರ್ಣ ಅರ್ಥ ಪಡೆಯುತ್ತದೆ. ದೇಶದ ಸರ್ವತೋಮುಖ ಬೆಳವಣಿಗೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯ ಪಾಲುಗಾರಿಕೆ ಮುಖ್ಯ ಎಂದರು.
ಸ್ವಾತಂತ್ರ್ಯ ದಿನಾಚರಣೆಯು ಏಕತೆ ಮತ್ತು ಸಹೋದರತ್ವದ ಸಂದೇಶ ಸಾರುತ್ತದೆ. ನಾವೆಲ್ಲರೂ ಒಟ್ಟಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂಬುದು ಹಬ್ಬದ ಪ್ರಮುಖ ಸಂದೇಶ. ಪಥಸಂಚಲನದ ಮೂಲಕ ಜನರಲ್ಲಿ ರಾಷ್ಟ್ರಾಭಿಮಾನದ ಕಹಳೆ ಮೊಳಗಿಸಿದ ರೋಟರಿ ಟಾಯ್ಸ್ ಸಿಟಿ ಸಂಸ್ಥೆಯ ಕಾರ್ಯ ಶ್ಲಾನೀಯ ಎಂದರು.
ನ್ಯಾ.ಸುರೇಶ್, ರೋಟರಿ ಟಾಯ್ಸ್ ಸಿಟಿ ಅಧ್ಯ ರೋ.ಬಿ.ಎಂ.ನಾಗೇಶ್, ಕಾರ್ಯದರ್ಶಿ ಸಂತೋಷ್ ಪಾಪಣ್ಣ ಮಾತನಾಡಿದರು. ತಾಲೂಕು ವಕೀಲರ ಸಂದ ಅಧ್ಯ ಟಿ.ವಿ.ಗಿರೀಶ್, ಬಮುಲ್ ನಿರ್ದೇಶಕ ಎಸ್.ಲಿಂಗೇಶ್ಕುಮಾರ್, ಲಯನ್ಸ್ ಸಂಸ್ಥೆಯ ವೆಂಕಟಸುಬ್ಬಯ್ಯ ಚಟ್ಟಿ, ರೋಟರಿ ಸಂಸ್ಥೆಯ ಬೈ ಶ್ರೀನಿವಾಸ್, ಮಾಸ್ತಿಗೌಡ, ರಾಜೇಶ್, ಐಟಿಸಿ ರು, ಶೇಖರ್ ಲಾಡ್, ರಾಜೇಶ್ ಅಪ್ಪಗೆರೆ, ಮಹೇಶ್, ಮೋಹನ್ ಕುಮಾರ್, ಶ್ರೀನಿವಾಸ್, ವಿಜಯ್, ಸುಕೃತ್ ಸೇರಿದಂತೆ ವಿವಿಧ ಸಂ&ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಭಾಗಿಯಾಗಿದ್ದರು.