

ಯಲಬುರ್ಗಾ: ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ತಾಪಂ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ್ ಹೇಳಿದರು.
ತಾಲೂಕಿನ ಹೊಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಿ ಮಾತನಾಡಿದರು.
ಇದನ್ನೂ ಓದಿ: 10ಕ್ಕೂ ಅಧಿಕ ಶಾಲೆಗಳಲ್ಲಿ ಮಕ್ಕಳ ಕೊರತೆ
ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕು. ಪ್ರತಿಯೊಬ್ಬ ಪಾಲಕರು ಗುಣಾತ್ಮಕ ಶಿಕ್ಷಣ ಕೊಡಿಸಬೇಕು. ಶಿಕ್ಷಕರು ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ಎಸ್ಡಿಎಂಸಿ ಅಧ್ಯಕ್ಷ ಶಂಕರ ಮೂಲಿ, ಗ್ರಾಪಂ ಸದಸ್ಯ ರವಿಚಂದ್ರ ಭಾವಿಕಟ್ಟಿ, ಮುಖಶಿಕ್ಷಕ ಸಂಗಯ್ಯ ಹಿರೇಮಠ, ಪ್ರಮುಖರಾದ ಹಿರೇಹನುಮಂತಪ್ಪ ಭಾವಿಕಟ್ಟಿ, ಹನಮಂತಗೌಡ ಗೌಡ್ರ, ಹಿರೇಹೊಳೆಗೌಡ ಗೌಡ್ರ, ಶಿವನಗೌಡ ಪೊಲೀಸ್ ಪಾಟೀಲ್, ಹನುಮೇಶ ಮೂಲಿ, ಮಾನಪ್ಪ ಕಜ್ಜಿ,
ಈಶಪ್ಪ ಮೂಲಿ, ಬಸವರಾಜ ಬಿಂಗಿ, ಜಗನ್ನಾಥ ಕಮ್ಮಾರ, ಪ್ರಕಾಶ ಗೌಡ್ರ, ರಾಮನಗೌಡ ಪಾಟೀಲ್, ಮಹಾಂತೇಶ ಲಗಳೂರು, ಶಿಕ್ಷಕರಾದ ಮುತ್ತಪ್ಪ ಪಮ್ಮಾರ, ಅನ್ನಪೂರ್ಣ ಹಿರೇಮಠ, ಮಮತಾ ನಂದಿನಿ, ಲಕ್ಷ್ಮೀ ಇದ್ದರು.