ಸಾಧನೆ ಆಧರಿಸಿ ಜನರ ಮನ್ನಣೆ

sanmana
ಕೋಡಿ ಕನ್ಯಾಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಸ್ಥಾನದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಅವರನ್ನು ಸನ್ಮಾನಿಸಲಾಯಿತು.
Published on

ಕೋಟ: ಸಾಧನೆಯನ್ನು ಆಧರಿಸಿ ಅದೆಷ್ಟೋ ಮನ್ನಣೆಗೆ ಪಾತ್ರನಾಗಿದ್ದರೂ ಇಂದು ನನ್ನ ಜನ್ಮ ಭೂಮಿ ಕೋಡಿಕನ್ಯಾಣದ ಹಿತೈಷಿಗಳು 28ನೇ ಸಾರ್ವಜನಿಕ ಶ್ರೀ ಗಣೇಶೋತ್ಸವದ ವೇದಿಕೆಯಲ್ಲಿ ನನ್ನನ್ನು ಗುರಿತಿಸಿದ್ದು ಅವಿಸ್ಮರಣೀಯ ಎಂದು ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಸ್ಥಾನ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಹೇಳಿದರು.

ಕೋಡಿ ಕನ್ಯಾಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಜಯ ತಿಂಗಳಾಯ, ಕೋಡಿ ಗ್ರಾಪಂ ಅಧ್ಯಕ್ಷೆ ಗೀತಾ ಗೋಪಾಲ ಖಾರ್ವಿ, ಸುಮಧುರ ಯುವಕ ಮಂಡಲ ಅಧ್ಯಕ್ಷ ವಾಸುದೇವ ಕಾಂಚನ್, ಪ್ರಗತಿ ಯುವಕ ಮಂಡಲ ಅಧ್ಯಕ್ಷ ಜಗನ್ನಾಥ ಅಮೀನ್, ಸಾಸ್ತಾನದ ರಾಫ ನಿರ್ಮಾಣ ಸಂಸ್ಥೆ ಆಡಳಿತ ಪಾಲುದಾರ ರಾಜೇಂದ್ರ ಸುವರ್ಣ, ಹಿರೇ ಮಹಾಲಿಂಗೇಶ್ವರ ಯಕ್ಷ ಸೌರಭ ಕಲಾ ಸಂಘದ ಅಧ್ಯಕ್ಷ ಕೋಡಿ ರಾಘವೇಂದ್ರ ಕರ್ಕೇರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಜಯ ಮಾಸ್ತರ್ ಮತ್ತಿತರರು ಉಪಸ್ಥಿತರಿದ್ದರು. ಸುರೇಶ ಖಾರ್ವಿ ವಂದಿಸಿಕದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net