ಭಾಷೆ ನೆಲ, ಸಂಸ್ಕೃತಿ ವಿಶೇಷ ಕೊಡುಗೆ

promo
ಬೈಂದೂರು ಉತ್ಸವ 2024ರ ಪ್ರೋಮೋವನ್ನು ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ ಲೋಕಾರ್ಪಣೆಗೊಳಿಸಿದರು
Published on

ಕುಂದಾಪುರ: ರಾಜ್ಯದಲ್ಲಿ ಅತ್ಯಂತ ಗ್ರಾಮೀಣ ಭಾಗಗಳನ್ನು ಒಳಗೊಂಡಿರುವ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬೈಂದೂರು ಉತ್ಸವ ಜಗತ್ತಿಗೆ ಉತ್ತಮ ಸಂದೇಶ ನೀಡಲಿದೆ. ಕುಂದಾಪುರದ ಭಾಷೆ ನೆಲ, ಜಲ, ಸಂಸ್ಕೃತಿ ವಿಶೇಷ ಕೊಡುಗೆ ನೀಡಿದೆ. ಶೈಕ್ಷಣಿಕ, ಧಾರ್ಮಿಕವಾಗಿ ಹಾಗೂ ಉದ್ಯಮ ಕ್ಷೇತ್ರದಲ್ಲೂ ಹೆಸರು ಮಾಡಿರುವ ಬೈಂದೂರಿನಲ್ಲಿ ಉತ್ಸವ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು.

ನ.1, 2, 3ರಂದು ಮೂರು ದಿನಗಳ ಕಾಲ ಬೈಂದೂರಿನಲ್ಲಿ ನಡೆಯಲಿರುವ ಬೈಂದೂರು ಉತ್ಸವ 2024ರ ಪ್ರೋಮೋವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಬೈಂದೂರು ಉತ್ಸವದ ಸಂಚಾಲಕ ಗಣೇಶ್ ಗಾಣಿಗ ಉಪ್ಪುಂದ, ಪುಷ್ಪರಾಜ್ ಶೆಟ್ಟಿ, ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಶರತ್ ಶೆಟ್ಟಿ ಬಿಜೂರು, ಪುರಂದರ ಉಪ್ಪುಂದ, ಶ್ರೀಧರ್ ವಸ್ರೆ, ಪತ್ರಕರ್ತ ಕೃಷ್ಣ ಬಿಜೂರ್ ಮೊದಲಾದವರು ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net