ಪರಸ್ಪರ ಹೊಂದಾಣಿಕೆ ಜೀವನ ನಡೆಸಿ- ದಿಂಡದಹಳ್ಳಿಯ ಶಿವಾನಂದ ಸ್ವಾಮೀಜಿ ಸಲಹೆ

Hirekuruvatti Mass Marriage
ಹಿರೇಕುರುವತ್ತಿ ಗ್ರಾಮದ ಹಿರೇಮಠದಲ್ಲಿ ಗುರುವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 9 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
Published on

ಹೂವಿನಹಡಗಲಿ: ಸಾಮೂಹಿಕ ವಿವಾಹಗಳು ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ಬಡ ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗಿವೆ ಎಂದು ದಿಂಡದಹಳ್ಳಿಯ ಪಶುಪತಿ ಶಿವಾಚಾರ್ಯ ಶಿವಾನಂದ ಸ್ವಾಮೀಜಿ ಹೇಳಿದರು.

ಹಿರೇಕುರುವತ್ತಿ ಗ್ರಾಮದ ಹಿರೇಮಠದಲ್ಲಿ ಗುರುವಾರ ಸಿದ್ಧನಂದೀಶ್ವರ ಶಿವಾಚಾರ್ಯರ 16ನೇ ವರ್ಷದ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ನಿಮಿತ್ತ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೊಸ ಜೀವನಕ್ಕೆ ಕಾಲಿಡುತ್ತಿರುವ ದಂಪತಿಗಳು ಪರಸ್ಪರ ಅರ್ಥೈಸಿಕೊಳ್ಳುವ ಮೂಲಕ ಜೀವನ ನಡೆಸಬೇಕು. ಗುರು, ಹಿರಿಯರನ್ನು ಗೌರವದಿಂದ ಕಾಣಬೇಕು. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿ ಉತ್ತಮ ಪ್ರಜೆಯನ್ನಾಗಿಸಬೇಕು ಎಂದರು.

ತೆಲಿಗಡ್ಡಿ ಮಠದ ಶಿವಾನಂದ ಶಿವಾಚಾರ್ಯರು ಮಾತನಾಡಿ, ಪತಿ-ಪತ್ನಿ ಸಹಬಾಳ್ವೆಯಿಂದ ಬದುಕಿನ ಕೊನೆಯವರೆಗೂ ಶಾಂತಿ ನೆಮ್ಮದಿಯಿಂದ ಇರಬೇಕು ಎಂದರು. ಮಳೆಯೋಗೀಶ್ವರ ಸ್ವಾಮೀಜಿ ಮಾತನಾಡಿದರು. ಸಿದ್ಧನಂದೀಶ್ವರ ಶಿವಾಚಾರ್ಯರು ಅಡ್ಡಪಲಕ್ಕಿ ಮಹೋತ್ಸವ ಮತ್ತು ತುಲಾಬಾರ ಕಾರ್ಯಕ್ರಮ ಜರುಗಿತು.

ಅಂಗೂರ ಹಿರೇಮಠದ ಶಿವಯೋಗಿ ಸ್ವಾಮೀಜಿ, ಮುಖಂಡರಾದ ಶಿವಲಿಂಗಪ್ಪ, ಅಶೋಕಪ್ಪ, ಬಸವನಗೌಡ, ಕೊಟ್ರೇಶಪ್ಪ, ಚನ್ನಸಬಸಪ್ಪ ಸುಕಂದ, ಪ್ರಕಾಶ್ ಕೆ, ವಿರೂಪಾಕ್ಷಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net