ಪ್ರಾಪರ್ಟಿ ಎಕ್ಸ್​ಪೋಗೆ ಭರ್ಜರಿ ಜನಸ್ಪಂದನೆ: ಮೇಳಕ್ಕೆ ಚಿತ್ರನಟ ಶ್ರೀಮುರಳಿ ಚಾಲನೆ, ವಿಜಯನಗರದಲ್ಲಿ ವಿಜಯವಾಣಿ ಆಯೋಜನೆ | Real Estate Expo

Real Estate Expo
Published on

Real Estate Expo : ರಾಜಧಾನಿಯಲ್ಲಿ ಸೂರು ಹೊಂದುವ ಅಭಿಲಾಷೆಯೊಂದಿಗೆ ಆಗಮಿಸಿದ್ದ ನೂರಾರು ನಾಗರಿಕರಿಗೆ ವಿಜಯವಾಣಿ ಆಯೋಜಿಸಿದ್ದ ‘ರಿಯಲ್ ಎಸ್ಟೇಟ್ ಎಕ್ಸ್​ಪೋ-2024’, ಗ್ರಾಹಕರು ಹಾಗೂ ರಿಯಾಲ್ಟಿ ಕಂಪನಿಗಳ ಮಧ್ಯೆ ಸೇತುವೆಯಾಗಿ ಕನಸಿನ ಮನೆಯನ್ನು ಸಾಕಾರಗೊಳಿಸಲು ವೇದಿಕೆ ಕಲ್ಪಿಸಿತು.

ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ‘ಅಶ್ವಸೂರ್ಯ ರಿಯಾಲಿಟಿಸ್’ ಸಹಯೋಗದಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ಪ್ರಾಪರ್ಟಿ ಮೇಳವನ್ನು ಕನ್ನಡದ ಖ್ಯಾತ ಚಿತ್ರನಟ ಶ್ರೀಮುರಳಿ ಉದ್ಘಾಟಿಸಿ, ಶುಭಕೋರಿದರು. ಎಕ್ಸ್​ಪೋಗೆ ಚಾಲನೆ ದೊರೆತ ಬೆನ್ನಲ್ಲೇ ಸಾರ್ವಜನಿಕರು ಮಳಿಗೆಗಳಿಗೆ ತೆರಳಿ ತಮಗಿಷ್ಟವಾದ ಸ್ಥಳಗಳಲ್ಲಿನ ಸೈಟ್, ವಿಲ್ಲಾ ಹಾಗೂ ಫ್ಲ್ಯಾಟ್​ಗಳ ಮಾಹಿತಿ ಸಂಗ್ರಹಿಸಿ, ಸೂರು ಹೊಂದುವ ಆಕಾಂಕ್ಷೆ ವ್ಯಕ್ತಪಡಿಸಿದರು. ಮೊದಲ ದಿನವೇ ಎಕ್ಸ್​ಪೋಗೆ ನಿರೀಕ್ಷೆಗೂ ಮೀರಿ ಜನಸ್ಪಂದನೆ ವ್ಯಕ್ತವಾಯಿತು.

ಒಂದೇ ಸೂರಿನಲ್ಲಿ 25ಕ್ಕೂ ಹೆಚ್ಚಿನ ಸಂಖ್ಯೆಯ ಹೆಸರಾಂತ ರಿಯಾಲ್ಟಿ ಕಂಪನಿಗಳು ಪಾಲ್ಗೊಂಡಿದ್ದರಿಂದ ಜನರಿಗೆ ಸೂರು ಹೊಂದುವ ಆಯ್ಕೆಗೆ ಹೆಚ್ಚಿನ ಅವಕಾಶ ಒದಗಿತು. ಕಂಪನಿಗಳು ತಮ್ಮ ವೈವಿಧ್ಯ ಮಯ ಪ್ರಾಜೆಕ್ಟ್​ಗಳನ್ನು ಗ್ರಾಹಕರಿಗೆ ಮನಮುಟ್ಟುವಂತೆ ವಿವರಿಸಿ ಜನರ ಮನಗೆದ್ದವು. ನಗರದ ಒಳಗೆ, ಹೊರ ವಲಯ ಸೇರಿ ಬೆಂಗಳೂರಿನ ಆಚೆಗೂ ನಿರ್ವಿುಸಿರುವ ಫ್ಲ್ಯಾಟ್, ವಿಲ್ಲಾಗಳನ್ನು ಖರೀದಿಸಿ ನೆಮ್ಮದಿಯ ಬದುಕು ಸಾಗಿಸಬಹುದು ಎಂಬುದನ್ನು ಮನವರಿಕೆ ಮಾಡಿಕೊಡಲಾಯಿತು. ಹಲವು ಕಂಪನಿಗಳು ಗ್ರಾಹಕರಿಗೆ ರಿಯಾಯಿತಿ ಘೋಷಿಸಿವೆ.

ಮಳಿಗೆಗಳಲ್ಲಿ ಮಾಹಿತಿ ಕಣಜ: ಮೇಳದಲ್ಲಿ ಮಳಿಗೆಗಳನ್ನು ಹಾಕಿರುವ ವಿವಿಧ ರಿಯಾಲ್ಟಿ ಕಂಪನಿಗಳು ತಮ್ಮ ಹತ್ತಾರು ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪ್ರದರ್ಶಿಸಿವೆ. ಇವುಗಳ ಬಗ್ಗೆ ಆಯಾ ಕಂಪನಿಗಳ ಪ್ರತಿನಿಧಿಗಳು ಗ್ರಾಹಕರಿಗೆ ವಿವರವಾಗಿ ತಿಳಿಸಿ ಆಯ್ಕೆಯನ್ನು ಸುಲಭಗೊಳಿಸುವ ಯತ್ನ ನಡೆಸಿದರು. ಜನರು ಕೂಡ ತಮಗಿಷ್ಟವಾದ ಏರಿಯಾ, ಸೈಟ್/ವಿಲ್ಲಾಗಳ ವಿಸ್ತೀರ್ಣ, ದರ, ಮೂಲಸೌಕರ್ಯ ಸಿಗುವ ಮಾಹಿತಿಯನ್ನು ಕೇಳಿ ಖಾತರಿಪಡಿಸಿಕೊಂಡು ಖರೀದಿಸುವ ಆಸೆ ವ್ಯಕ್ತಪಡಿಸಿದರು. ಕೆಲ ದಂಪತಿ ಸಮೇತ ಆಗಮಿಸಿ ಹೊಸ ಮಾದರಿ ಹಾಗೂ ನವೀನ ಸೌಲಭ್ಯಗಳನ್ನು ಹೊಂದಿರುವ ಫ್ಲ್ಯಾಟ್​ಗಳ ಬಗ್ಗೆ ವಿಚಾರಿಸಿ ಖರೀದಿಸುವ ಆಕಾಂಕ್ಷೆ ವ್ಯಕ್ತಪಡಿಸಿದ್ದು ಎಕ್ಸ್​ಪೋದಲ್ಲಿ ಭಾಗಿಯಾಗಿದ್ದ ರಿಯಾಲ್ಟಿ ಕಂಪನಿಗಳಿಗೆ ಹುರುಪು ನೀಡಿತು.

ಮೇಳದಲ್ಲಿ ವಿಆರ್​ಎಲ್ ಮೀಡಿಯಾ ಪ್ರೖೆ.ಲಿ. ಉಪಾಧ್ಯಕ್ಷ ಅರುಣ್ ಕೆ.ಆರ್., ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ, ವಿಜಯವಾಣಿ ಡಿಜಿಟಲ್ ಸಂಪಾದಕ ಸಿದ್ದು ಕಾಳೋಜಿ, ಕಂಪನಿಗಳ ಪ್ರಮುಖರು ಭಾಗವಹಿಸಿದ್ದರು.

ಸಾಲಸೌಲಭ್ಯದ ಬಗ್ಗೆ ವಿಚಾರಣೆ

ಪ್ರಸ್ತುತ ಮಾರುಕಟ್ಟೆಯಲ್ಲಿ ಮಧ್ಯಮ ವರ್ಗ ಹಾಗೂ ಮೇಲ್ಮಧ್ಯಮ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಸೂರು ಹೊಂದುವ ಟ್ರೆಂಡ್ ಕಂಡುಬಂದಿದೆ. ಇದನ್ನು ಪುಷ್ಟೀಕರಿಸುವಂತೆ ಎಕ್ಸ್​ಪೋಗೆ ಆಗಮಿಸಿದ್ದ ನೂರಾರು ಮಂದಿ ಕೈಗೆಟಕುವ ದರದಲ್ಲಿ ಸೈಟ್, ಮನೆಗಳನ್ನು ಖರೀದಿಸಲು ಸಾಲಸೌಲಭ್ಯದ ಬಗ್ಗೆ ಮಾಹಿತಿ ಪಡೆದರು. ಯಾವ ಬ್ಯಾಂಕ್​ನಲ್ಲಿ ಎಷ್ಟು ಪ್ರಮಾಣದ ಬಡ್ಡಿದರಲ್ಲಿ ಲೋನ್ ಸಿಗಲಿದೆ, ಇದನ್ನು ಮರುಪಾವತಿಸುವ ವಿಧಾನ ಹಾಗೂ ಗಡುವು, ದಾಖಲೆ ಪತ್ರಗಳನ್ನು ಹೊಂದಿಸಿಕೊಳ್ಳುವಿಕೆ ಇತ್ಯಾದಿ ಕುರಿತು ಮಾಹಿತಿಯನ್ನು ಪಡೆದುಕೊಂಡರು. ಬಹುತೇಕ ರಿಯಾಲ್ಟಿ ಕಂಪನಿಗಳು ಸಾಲಸೌಲಭ್ಯ ಒದಗಿಸುವ ಬಗ್ಗೆ ಗ್ರಾಹಕರಿಗೆ ವಾಗ್ದಾನ ನೀಡಿರುವುದು ಸೈಟ್, ವಿಲ್ಲಾಗಳ ಮಾರಾಟಕ್ಕೆ ಎಕ್ಸ್​ಪೋ ವೇದಿಕೆ ಕಲ್ಪಿಸಿತು.

ಲಾಟರಿಯಲ್ಲಿ ಚಿನ್ನದ ನಾಣ್ಯ ಗೆದ್ದ ಗ್ರಾಹಕರು

ಎಕ್ಸ್​ಪೋದಲ್ಲಿ ಪಾಲ್ಗೊಂಡಿದ್ದ ಗ್ರಾಹಕರಿಗೆ ಚಿನ್ನದ ನಾಣ್ಯ ಗೆಲ್ಲುವ ಅವಕಾಶ ಕಲ್ಪಿಸಲಾಗಿತ್ತು. ನಟ ಶ್ರೀಮುರಳಿ ಅವರು ಮೊದಲ ವಿಜೇತರ ಹೆಸರುಳ್ಳ ಚೀಟಿಯನ್ನು ಲಾಟರಿ ಮೂಲಕ ಎತ್ತಿ ಬಹುಮಾನ ಪ್ರಕಟಿಸಿದರು. ಎಸ್.ವಿ. ಭಾಸ್ಕರ್, ಪ್ರಕಾಶ್ ಹಾಗೂ ಸುವರ್ಣಮ್ಮ ಚಿನ್ನದ ನಾಣ್ಯ ವಿಜೇತರಾಗಿ ಹೊರಹೊಮ್ಮಿದರು. ಸುವರ್ಣ ನಾಣ್ಯ ಬಹುಮಾನ ಗಿಟ್ಟಿಸಿದ್ದಕ್ಕೆ ಮೂವರೂ ವಿಜೇತರು ವಿಜಯವಾಣಿ ಹಾಗೂ ರಿಯಾಲ್ಟಿ ಕಂಪನಿಗಳಿಗೆ ಧನ್ಯವಾದ ಅರ್ಪಿಸಿದರು.

ಜಮೀನಿನ ಮೇಲೆ ಹೂಡಿಕೆ ಬೆಸ್ಟ್

ಪ್ರಸ್ತುತ ಕಾಲಘಟ್ಟದಲ್ಲಿ ನಾಗರಿಕರು ತಮ್ಮ ಸೂರು ಹೊಂದುವ ಆಸೆಯನ್ನು ಈಡೇರಿಸಿಕೊಳ್ಳುವ ಸನ್ನಿವೇಶದಲ್ಲಿ ಜಮೀನಿನ ಮೇಲೆ ಹೂಡಿಕೆ ಅತ್ಯುತ್ತಮ ಆಯ್ಕೆ ಆಗಿರುತ್ತದೆ. ಜಮೀನಿನ ಬೆಲೆ ಎಂದೂ ಕಡಿಮೆ ಆಗದು. ನನಗೆ ತಿಳಿದ ಮಟ್ಟಿಗೆ ಇದೇ ಮಾಹಿತಿ ಖಾತರಿಯಾಗಿದೆ. ಈ ರೀತಿ ಜಮೀನಿನ ಮೇಲೆ ಹೂಡಿಕೆ ಮಾಡುವುದರಿಂದ ಕುಟುಂಬಕ್ಕೆ ಒಳ್ಳೆಯದಾಗುತ್ತದೆ. ಕುಟುಂಬಸ್ಥರೆಲ್ಲರೂ ಸೂರು ಹೊಂದಿ ಖುಷಿಯಾಗಿರಲು ಎಲ್ಲರಿಗೂ ಶುಭ ಕೋರುವೆ ಎಂದು ಚಿತ್ರನಟ ಶ್ರೀಮುರುಳಿ ಹೇಳಿದರು. ‘ಬಘೀರ’ ಚಿತ್ರ ತುಂಬಾ ಚೆನ್ನಾಗಿರುವುದರಿಂದ ಯಶಸ್ವಿಯಾಗಿದೆ. ಇದಕ್ಕಾಗಿ ಅಭಿಮಾನಿಗಳು, ಚಿತ್ರತಂಡ ಹಾಗೂ ಮಾಧ್ಯಮಕ್ಕೆ ಧನ್ಯವಾದ ಹೇಳುವೆ. ಮುಂದೆಯೂ ಇನ್ನೂ ಉತ್ತಮ ಚಿತ್ರಗಳನ್ನು ನೀಡುವ ಪ್ರಯತ್ನ ಮಾಡುವೆ. ಶೀಘ್ರವೇ ಹೊಸ ಚಿತ್ರದ ಬಗ್ಗೆ ಗುಡ್ ನ್ಯೂಸ್ ಕೊಡುವೆ ಎಂದು ಶ್ರೀಮುರುಳಿ ವಾಗ್ದಾನ ನೀಡಿದರು.

ಪ್ರತಿಷ್ಠಿತ ಕಂಪನಿಗಳು ಭಾಗಿ

ವಿಜಯವಾಣಿ ಪ್ರಾಪರ್ಟಿ ಎಕ್ಸ್​ಪೋದಲ್ಲಿ 25ಕ್ಕೂ ಹೆಚ್ಚು ರಿಯಲ್ ಎಸ್ಟೇಟ್ ಕಂಪನಿಗಳು ಪಾಲ್ಗೊಂಡಿವೆ. ಅಶ್ವಸೂರ್ಯ ರಿಯಾ ಲಿಟಿಸ್, ಶರಣ್ಯ ಫಾಮ್್ಸ ಆಂಡ್ ರೆಸಾರ್ಟ್ಸ್, ಗುರು ಪುನ್ವಾನಿ, ಸಪ್ತಗಿರಿ ಪ್ರಮೋಟರ್ಸ್ ಆಂಡ್ ಡೆವಲಪರ್ಸ್, ಡಿಎಸ್ ಮ್ಯಾಕ್ಸ್, ಕೆಎನ್​ಎಸ್ ಇನ್ಪ್ರಾ, ಸಿಆರ್ ರಿಯಲ್ ಎಸ್ಟೇಟ್, ಫೈನೆಸ್ಟ್ ಪ್ರಾಪ ರ್ಟೀಸ್, ವಿ2 ಹೋಲ್ಡಿಂಗ್ಸ್, ಸಮೃದ್ಧಿ ಇಕೋ ಫಾಮ್್ಸರ್ ಚೆರಿಗನ್ ಗ್ರೂಪ್, ರಾಜಶೇಖರ್ ಡೆವಲಪರ್ಸ್ ಪ್ರೖೆ. ಲಿ., ನಿಶ್ಚಿತ ಪ್ರಾಪರ್ಟೀಸ್, ಆದಿತ್ಯ ಪ್ರಮೋಟರ್ಸ್, ರಿಯಾನ್ಸ್ ಇನ್ಪ್ರಾ ಪ್ರಾಜೆಕ್ಟಸ್, ಕೃಷ್ಣ ಗ್ರೀನ್ಸ್ ಮಿಡ್ ಲೇಕ್ ಕಂಪನಿಗಳು ಪಾಲ್ಗೊಂಡಿವೆ. ಶೆಟ್ಟಿ ಆಂಡ್ ಶೆಟ್ಟಿ ಕನ್​ಸ್ಟ್ರಕ್ಷನ್ ಆಂಡ್ ಹೌಸಿಂಗ್, ಬೆನಕ ಗೋಲ್ಡ್ ಕಂಪನಿಗಳು ಭಾಗಿ. ಟ್ರಾವೆಲ್ ಪಾಟ್ನರ್ ಆಗಿ ವಿಜಯಾನಂದ ಟ್ರಾವೆಲ್ಸ್ ಕಂಪನಿ ಗ್ರಾಹಕರಿಗೆ ಮಾಹಿತಿ ಒದಗಿಸಿತು.

ಸಾರ್ವಜನಿಕರ ಅಭಿಪ್ರಾಯ . . .

ಬೆಂಗಳೂರು ನಗರದ ಪಶ್ಚಿಮ ದಿಕ್ಕಿನಲ್ಲಿ ನಿವೇಶನ ಖರೀದಿಸಲು ಮುಂದಾಗಿದ್ದೇನೆ. ಅದಕ್ಕಾಗಿ ‘ಪ್ರಾಪರ್ಟಿ ಎಕ್ಸ್​ಪೋ’ಗೆ ಭೇಟಿ ನೀಡಿದ್ದು, ಹಲವು ವಸತಿ ಯೋಜನೆಗಳ ಕುರಿತು ಮಾಹಿತಿ ಪಡೆದುಕೊಂಡಿದ್ದೇನೆ. ಒಂದೇ ಸೂರಿನಡಿ ಉಪಯುಕ್ತ ಮಾಹಿತಿ ಸಿಗುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ.

| ಪ್ರದೀಪ್​ಕುಮಾರ್ ತಾವರಕೆರೆ

ಮೈಸೂರು-ಮಳವಳ್ಳಿ ರಸ್ತೆ ಸಮೀಪ ‘ಶರಣ್ಯ ಹಿಲ್​ವ್ಯೂ ಫಾಮ್್ಸರ್ ಹೌಸ್-2’ ಯೋಜ ನೆಯು ಹೂಡಿಕೆದಾರರಿಗೆ ಹೇಳಿ ಮಾಡಿಸಿದ ಜಾಗವಾಗಿದೆ. ಈ ಫಾಮರ್್​ಲ್ಯಾಂಡ್ ಮೈಸೂರಿಗೆ 32 ಕಿ.ಮೀ. ಅಂತರವಿದೆ. ಶ್ರವಣಬೆಳಗೊಳ- ಕೆ.ಆರ್. ಪೇಟೆ ರಸ್ತೆ ಸಮೀಪ 25 ಎಕರೆಯಲ್ಲಿ ‘ಶರಣ್ಯ ವಿಕೇಂಡ್ ವಿಲೇಜ್’, ಮೈಸೂರು-ಮಳವಳ್ಳಿ ರಸ್ತೆಯ ಸಮೀಪ ‘ಶರಣ್ಯ ಹಿಲ್ ವ್ಯೂ ಫಾಮ್್ಸರ್1 ಹಾಗೂ ಇದೇ ರಸ್ತೆಯಲ್ಲಿ ‘ಶರಣ್ಯ ಸ್ಯಾಂಡಲ್ ವ್ಯಾಲಿ ಫಾಮರ್್​ಲ್ಯಾಂಡ್’ ಯೋಜನೆ ಅಭಿವೃದ್ಧಿಪಡಿಸಿದ್ದು, ಕೈಗೆಟುಕುವ ದರದಲ್ಲಿ ಫಾಮ್ರ್ ಲ್ಯಾಂಡ್ ಖರೀದಿಸಬಹುದು. ಎಕ್ಸ್​ಪೋದಲ್ಲಿ ಫಾಮ್ರ್ ಲ್ಯಾಂಡ್ ಬುಕಿಂಗ್ ಮಾಡಿದವರಿಗೆ ಉಚಿತವಾಗಿ ದುಬೈ ಅಥವಾ ಬಾಲಿ’ ಟ್ರಿಪ್ ಆಫರ್ ನೀಡಿದ್ದೇವೆ.

| ವಿ.ಎಂ.ರಾಜೇಶ್ ಮಾಲೀಕ. ಶರಣ್ಯ ಫಾರ್ಮ್ಸ್​ ಸಂಸ್ಥೆ

ಬೆಂಗಳೂರಿನಲ್ಲಿರುವ ರಿಯಾಲ್ಟಿ ಕಂಪನಿಗಳ ದೂರವಾಣಿ ಸಂಖ್ಯೆ ಪಡೆದು ಅವರಿಗೆ ಕರೆ ಮಾಡಿ, ಕಚೇರಿಗೆ ತೆರಳಿ ಮಾಹಿತಿ ಪಡೆಯುವುದು ಕಷ್ಟವಾಗುತ್ತದೆ. ಇಂಥ ಸಂದರ್ಭದಲ್ಲಿ ಪತ್ರಿಕೆ ನಡೆಸುತ್ತಿರುವ ಮೇಳದಿಂದ ಗ್ರಾಹಕರಿಗೆ ಅನುಕೂಲವಾಗಿದೆ. ಮೇಳದಲ್ಲಿ ಬ್ಯಾಂಕ್​ಗಳು ಪಾಲ್ಗೊಂಡಿರುವುದು ಉತ್ತಮವಾಗಿದೆ. ಉದ್ಯಾನನಗರಿಯಲ್ಲಿ ನಿವೇಶನ ಆಸೆಪಟ್ಟವರ ಕನಸು ನನಸು ಮಾಡಲಿಕ್ಕೆ ಈ ಮೇಳ ಸಹಕಾರಿಯಾಗಿದೆ.

| ಚಾಂದಿನಿ ತಾವರಕೆರೆ

ಮಾಗಡಿ ರಸ್ತೆಯ ಕಿತ್ತನಹಳ್ಳಿಯ ಪುನೀತ್​ರಾಜ್​ಕುಮಾರ್ ಬಿಡಿಎ ವಿಲ್ಲಾ ಹಿಂಭಾಗದಲ್ಲಿ ‘ಹುಣ್ಣಿಗೆರೆ’ ಬಳಿ ಮೂರು ಎಕರೆಯಲ್ಲಿ ಅಭಿವೃದ್ಧಿಪಡಿಸಿರುವ ‘ಎಸ್​ಜಿ ಡ್ರಿಮ್್ಸ’ ಲೇಔಟ್​ನಲ್ಲಿ ಒಟ್ಟು 71 ನಿವೇಶನಗಳಿವೆ. ಪ್ರತಿ ಚದರಡಿಗೆ 1,499 ರೂ. ನಿಗದಿಪಡಿಸಲಾಗಿದೆ. ಎಕ್ಸ್​ಪೋದಲ್ಲಿ ನಿವೇಶನ ಬುಕಿಂಗ್ ಮಾಡಿದವರಿಗೆ ಪ್ರತಿ ಚದರಡಿಗೆ 50 ರೂ. ರಿಯಾಯಿತಿ ದೊರೆಯಲಿದೆ. ಬ್ಯಾಂಕ್ ಸೌಲಭ್ಯವಿದೆ. ಲೇಔಟ್​ನಿಂದ ಸೊಂಡೆಕೊಪ್ಪಗೆ 1 ಕಿ.ಮೀ. ಅಂತರವಿದೆ. ನಿವೇಶನ ಖರೀದಿಸಿ ತಕ್ಷಣ ಮನೆ ಕಟ್ಟಬಹುದು. ಗೇಟೆಡ್ ಕಮ್ಯೂನಿಟಿ ಸೌಲಭ್ಯವಿದೆ.

| ಎಸ್.ಜಗದೀಶ್ ಎಂಡಿ. ಎಸ್.ಜಿ. ಗ್ರೂಪ್ಸ್ ಡೆವಲಪರ್ಸ್ ಆಂಡ್ ಪ್ರಮೋಟರ್ಸ್

ನೆಲಮಂಗಲ ರಸ್ತೆ ಅಥವಾ ಮೈಸೂರು ರಸ್ತೆ ಬಳಿ ನಿವೇಶನ ಖರೀದಿಸುವ ಆಸೆ ಇದೆ. ಅದಕ್ಕಾಗಿ ಒಳ್ಳೆಯ ವಸತಿ ಯೋಜನೆ ಹುಡುಕುವ ಸಲುವಾಗಿ ‘ಪ್ರಾಪರ್ಟಿ ಎಕ್ಸ್​ಪೋ’ಗೆ ಆಗಮಿಸಿದ್ದೇನೆ. ಇಲ್ಲಿ ಒಳ್ಳೆಯ ಮಾಹಿತಿ ಸಿಕ್ಕಿದೆ. ಕುಟುಂಬದವರ ಜತೆ ರ್ಚಚಿಸಿ ನಿವೇಶನ ಖರೀದಿ ಮಾಡುತ್ತೇವೆ.

| ಸತೀಶ್ ರಾಜಾಜಿನಗರ

ವಿಜಯವಾಣಿ ಪತ್ರಿಕೆಯವರು ‘ಪ್ರಾಪರ್ಟಿ ಎಕ್ಸ್​ಪೋ’ ಅನ್ನು ತುಂಬ ಚೆನ್ನಾಗಿ ಆಯೋಜಿಸಿದ್ದಾರೆ. ಒಂದೇ ಸೂರಿನಡಿ ಉಪಯುಕ್ತ ಮಾಹಿತಿ ದೊರೆಯಲಿವೆ. ನಿವೇಶನ ಮೇಲೆ ಬಂಡವಾಳ ಹೂಡಲು ಆಸೆ ಇದೆ. ಅದಕ್ಕಾಗಿ ಉತ್ತಮ ನಿವೇಶನ ಖರೀದಿಸಲು ಆಲೋಚನೆಯಲ್ಲಿ ತೊಡಗಿದ್ದೇನೆ.

| ಶ್ರೀಕಾಂತ್ ಬನಶಂಕರಿ

ಐಟಿ ಕಂಪನಿ ಉದ್ಯೋಗಿಯಾಗಿದ್ದು, ಪತಿ ಜತೆಗೆ ಆಗಮಿಸಿದ್ದೇನೆ. ಕೋಣನಕುಂಟೆ ಭಾಗದಲ್ಲಿ ಪ್ರಾಪರ್ಟಿ ನೋಡುತ್ತಿದ್ದೇವೆ. ಮೆಟ್ರೋ ಮುಂಭಾಗದಲ್ಲೇ ಎಕ್ಸ್​ಪೋ ಆಯೋಜಿಸಿರುವ ಕಾರಣದಿಂದ ನಗರದ ಯಾವುದೇ ಮೂಲೆಯಿಂದ ಸುಲಭವಾಗಿ ಎಕ್ಸ್​ಪೋಗೆ ಬರಲು ಅನುಕೂಲವಾಗಿದೆ.

| ನಿಧಿ ಬನಶಂಕರಿ

42 ಲಕ್ಷ ರೂ. ಹೂಡಿಕೆ -4.5 ಕೋಟಿ ರೂ. ಗಳಿಕೆ!

ಬೆಂಗಳೂರು: ರಿಯಾಲ್ಟಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈದ ‘ಅಶ್ವಸೂರ್ಯ ರಿಯಾಲಿಟಿಸ್ ಇಂಡಿಯಾ ಪ್ರೖೆ.ಲಿ.’ನ ನೂರಾರು ನಿವೇಶನಗಳು ‘ಪ್ರಾಪರ್ಟಿ ಎಕ್ಸ್​ಪೋ’ದಲ್ಲಿ ಮಾರಾಟವಾಗುತ್ತಿವೆ. ‘ಎಕ್ಸ್​ಪೋ’ ನಿಮಿತ್ತ ಕಂಪನಿ ನಿವೇಶನಗಳ ಮೇಲೆ ಆಕರ್ಷಕ ಕೊಡುಗೆ ನೀಡುತ್ತಿದೆ.

ಮದ್ದೂರು-ಹನಕೆರೆ ಮುಖ್ಯರಸ್ತೆ ಬಳಿ 16 ಎಕರೆಯಲ್ಲಿ ‘ಅಶ್ವಸೂರ್ಯ ಡೆಸ್ಟಿನಿ’ ಫಾಮರ್್​ಲ್ಯಾಂಡ್ ಯೋಜನೆ ಅಭಿವೃದ್ಧಿಪಡಿಸಿದೆ. ಈ ಫಾಮ್ರ್ ಲ್ಯಾಂಡ್ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ 2.5 ಕಿ.ಮೀ. ದೂರದಲ್ಲಿದೆ. ಪ್ರತಿ ಚದರಡಿಗೆ 750 ರೂ. ನಿಗದಿಪಡಿಸಲಾಗಿದೆ. ಫಾಮರ್್​ಲ್ಯಾಂಡ್​ನಲ್ಲಿ ಸಂಪೂರ್ಣ ಶ್ರೀಗಂಧ ಸಸಿಗಳಿವೆ. ಬಂಡವಾಳ ಹೂಡುವವರಿಗೆ ಹೇಳಿ ಮಾಡಿಸಿದ ಜಾಗ ಇದಾಗಿದೆ. ಕೇವಲ 42 ಲಕ್ಷ ರೂ. ಬಂಡವಾಳ ಹೂಡಿದರೆ, ಮುಂದಿನ 15 ವರ್ಷಗಳಲ್ಲಿ 4.5 ಕೋಟಿ ರೂ. ಆದಾಯ ಬರಲಿದೆ. ಈ 15 ವರ್ಷ ಕಾಲ ಕಂಪನಿಯೇ ಶ್ರೀಗಂಧ ಸಸಿ ನಿರ್ವಹಣೆ ಮಾಡಲಿದೆ. ಫಾಮರ್್​ಹೌಸ್​ನಲ್ಲಿ ಕ್ಲಬ್ ಹೌಸ್, ಈಜುಕೊಳ, ಬ್ಯಾಂಡ್ಮಿಟನ್ ಕೋರ್ಟ್, ಒಳಾಂಗಣ ಮತ್ತು ಹೊರಾಂಗಾಣ ಕ್ರೀಡಾಂಗಣ, ಮಕ್ಕಳ ಆಟದ ಮೈದಾನ, ಪಾರ್ಕ್, ಪ್ರತಿ ಫಾಮರ್್​ಹೌಸ್​ಗೆ ವಿಶಾಲವಾದ ರಸ್ತೆ, ಕುಡಿಯುವ ನೀರು, ಹನಿ ನೀರಾವರಿ, ವಿದ್ಯುತ್ ಸಂಪರ್ಕ, ಜಿಮ್ ಸೇರಿ ಅತ್ಯಾಧುನಿಕ ಸೌಲಭ್ಯಗಳಿವೆ.

ರಿಯಲ್ ಎಸ್ಟೇಟ್ ಮೇಳಕ್ಕೆ ಇಂದು ತೆರೆ

ವಿಜಯವಾಣಿ ರಿಯಲ್ ಎಸ್ಟೇಟ್ ಎಕ್ಸ್​ಪೋ ಭಾನುವಾರ (ಡಿ.1) ತೆರೆ ಕಾಣಲಿದೆ. ಕೊನೇ ದಿನ ವಿವಿಧ ರಿಯಾಲ್ಟಿ ಕಂಪನಿಗಳು ತಮ್ಮ ಪ್ರಾಜೆಕ್ಟ್ ಗಳ ಜತೆಗೆ ಯಾವ ಯಾವ ಸೌಲಭ್ಯಗಳನ್ನು ನೀಡಲಿವೆ ಮತ್ತು ಅವುಗಳನ್ನು ಹೇಗೆ ಪಡೆದುಕೊಳ್ಳಲು ಸಾಧ್ಯ ಎಂಬುದನ್ನು ವಿವರಿಸಲಿವೆ. ಸಮಪೂರ್ಣ ಪಾರದರ್ಶಕ ರೀತಿಯಲ್ಲೇ ಖರೀದಿ ಪ್ರಕ್ರಿಯೆ ಕೈಗೊಳ್ಳುವ ಭರವಸೆಯನ್ನು ಕಂಪನಿಗಳು ಗ್ರಾಹಕರಿಗೆ ನೀಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net