ನಡುರಸ್ತೆಯಲ್ಲೇ ಗುಂಡಿಟ್ಟು ಕೊಂದರು; ಕಾರೊಳಗೇ ರಕ್ತದ ಮಡುವಲ್ಲಿ ಬಿದ್ದು ಪ್ರಾಣಬಿಟ್ಟ ರಿಯಲ್​ ಎಸ್ಟೇಟ್ ಉದ್ಯಮಿ

crime
Published on

ಆನೇಕಲ್: ರಿಯಲ್​ ಎಸ್ಟೇಟ್ ಉದ್ಯಮಿಯೊಬ್ಬರನ್ನು ನಡುರಸ್ತೆಯಲ್ಲೇ ಗುಂಡಿಟ್ಟು ಕೊಲೆ ಮಾಡಲಾಗಿದೆ. ಪರಿಣಾಮವಾಗಿ, ಕಾರೊಳಗೇ ಅವರು ಪ್ರಾಣಬಿಟ್ಟಿದ್ದು, ಶವ ರಕ್ತಸಿಕ್ತವಾಗಿದೆ. ಬೆಂಗಳೂರಿನ ಆನೇಕಲ್​ನ ಶಿವಾಜಿ ವೃತ್ತದ ಬಳಿ ಈ ಘಟನೆ ಸಂಭವಿಸಿದೆ.

ರಿಯಲ್ ಎಸ್ಟೇಟ್ ಉದ್ಯಮಿ ರಾಜಶೇಖರ ರೆಡ್ಡಿ ಕೊಲೆಯಾದವರು. ಇವರು ಮಾರುತಿ ಸ್ವಿಫ್ಟ್ ಕಾರಿನಲ್ಲಿ ಪಟ್ಟಣದ ಕೋರ್ಟ್​ಗೆ ಬಂದಿದ್ದರು. ಇವರು ಕಾರಿನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ತಡೆದು ಗುಂಡು ಹಾರಿಸಿದ್ದಾರೆ.

ಕಾರಿನ ಬಲಭಾಗದ ಗಾಜಿನ ಮೂಲಕ ಗುಂಡು ಹೊಡೆದಿದ್ದು, ಅದು ಉದ್ಯಮಿಯೇ ಕುತ್ತಿಗೆಗೇ ಹೋಗಿ ನಾಟಿದೆ. ಗುಂಡೇಟಿನಿಂದ ಕತ್ತಿನ ಭಾಗದಲ್ಲಿ ತೀವ್ರವಾದ ಗಾಯವಾಗಿದ್ದು, ಅಲ್ಲೇ ಪ್ರಾಣ ಬಿಟ್ಟಿದ್ದಾರೆ. ಆ ನಂತರವೂ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಪರಾರಿಯಾಗಿದ್ದಾರೆ.

ಕೆಎ 01 ಎಮ್​ಜೆ 3311 ನಂಬರ್​ನ ಈ ಕಾರು ಬಿಟಿಎಂ ಬಡಾವಣೆ ನಿವಾಸಿ ಪದ್ಮ ಎಂಬವರ ಹೆಸರಿನಲ್ಲಿ ನೋಂದಣಿಯಾಗಿದೆ. ಕಾರಿನಲ್ಲಿ ಸಾಕಷ್ಟು ದಾಖಲೆಗಳಿವೆ. ಘಟನೆ ಹಿನ್ನೆಲೆ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net