ಶಾಸಕ ಚವ್ಹಾಣ ದೂರು ನೀಡಿದರೆ ಕೇಂದ್ರ ಸಚಿವ ಖುಬಾ ವಿರುದ್ಧ ತನಿಖೆ ನಡೆಸುತ್ತೇವೆ ಎಂದ ಖರ್ಗೆ

Investigation-scope
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಮ್ಮದು ಎಲ್ಲರಿಗೂ ನ್ಯಾಯ ಕೊಡುವ ಸರ್ಕಾರ. ಬಿಜೆಪಿ ಶಾಸಕರಿಗೂ ನ್ಯಾಯ ಕೊಡಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಔರಾದ ಶಾಸಕ ಪ್ರಭು ಚವ್ಹಾಣ ಅವರನ್ನು ಕೊಲೆ ಮಾಡಲು ಕೇಂದ್ರ ಸಚಿವ ಭಗವಂತ ಖೂಬಾ ಸಂಚು ಮಾಡಿದ್ದಾರೆ ಎಂಬ ಆರೋಪ ಕುರಿತು, ಶಾಸಕರು ದೂರು ನೀಡಿದರೆ, ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ ಎಂದರು.
ಸ್ವತಃ ಬಿಜೆಪಿ ಶಾಸಕರೇ ಆರೋಪಿಸಿದಾರೆ. ಕೇಂದ್ರ ಸಚಿವರ ಮೇಲೆ ಕೊಲೆಗೆ ಸಂಚು ಆರೋಪ ಮಾಡುತ್ತಿz್ದÁರೆ ಎಂದಿದ್ದಾರೆ. ಇದು ಸಣ್ಣ ಮಾತಲ್ಲ. ಶಾಸಕ ಚವ್ಹಾಣ ಅವರು ದೂರು ನೀಡಿದರೆ ತಕ್ಷಣವೇ ಕೇಸ್ ದಾಖಲಿಸಿಕೊಂಡು ನಮ್ಮ ಪೊಲೀಸರು ತನಿಖೆ ಆರಂಭಿಸುತ್ತಾರೆ ಎಂದು ಹೇಳಿದರು.  ಬಿಜೆಪಿ ಶಾಸಕರಿಗೂ ನ್ಯಾಯ ಕೊಡಿಸಲು ನಾವು  ಸಿದ್ಧರಿz್ದÉÃವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net