ಪತ್ರಿಕೆ ಓದಿನಿಂದ ಜ್ಞಾನಾಭಿವೃದ್ಧಿ ಸಾಧ್ಯ

Oplus_16908288
Oplus_16908288
Published on

ನಂಜನಗೂಡು: ಮಹಿಳೆಯರಿಗೆ ಸೀರೆ ಎಂದರೆ ಬಹಳ ಪ್ರಿಯ. ಈ ಸೀರೆಯ ಆಸೆಗಾದರೂ ಮಹಿಳೆಯರು ಪತ್ರಿಕೆಯನ್ನು ಹೆಚ್ಚಾಗಿ ಓದಲು ಇಂತಹ ಸ್ಪರ್ಧಾ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ ಎಂದು ನೀಲಕಂಠೇಶ್ವರ ಇಂಗ್ಲಿಷ್ ಮಾಧ್ಯಮ ಶಾಲೆ ಮುಖ್ಯ ಶಿಕ್ಷಕಿ ರಾಜೇಶ್ವರಿ ಅಭಿಪ್ರಾಯ ಪಟ್ಟರು.

ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿಯಿಂದ ಪಟ್ಟಣದ ರಾಷ್ಟ್ರಪತಿ ರಸ್ತೆಯ 12ನೇ ಕ್ರಾಸ್ ನಲ್ಲಿರುವ ಶ್ರೀ ನೀಲಕಂಠೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ನಂಜನಗೂಡು ತಾಲೂಕು ವ್ಯಾಪ್ತಿಯ ನಾರಿ ನಿನಗೊಂದು ಸಾರಿ ಸ್ಪರ್ಧೆಯ ಲಕ್ಕಿ ಡಿಪ್ ಮೂಲಕ ಐವರನ್ನು ಆಯ್ಕೆ ಮಾಡಿ ಮಾತನಾಡಿದರು.

ಇಂತಹ ಸ್ಪರ್ಧೆಗಳ ಮೂಲಕ ವಿಜಯವಾಣಿ ಪತ್ರಿಕೆಯನ್ನು ಓದುವ ಮೂಲಕ ತಮ್ಮ ಜ್ಞಾನ ಕೂಡ ವೃದ್ಧಿಯಾಗಲಿದೆ. ಜತೆಗೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆಯಬಹುದಾಗಿದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಕುಮಾರಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಟಿವಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಹಾವಳಿಯಿಂದ ಪತ್ರಿಕೆಗಳನ್ನು ಓದುವ ಹವ್ಯಾಸ ಕೊಂಚ ಕಡಿಮೆಯಾಗುತ್ತಿದೆ. ಮೊದಲು ಪ್ರತಿಯೊಬ್ಬರೂ ಪತ್ರಿಕೆಗಳನ್ನು ಕೊಂಡು ಓದುತ್ತಿದ್ದರು. ಪತ್ರಿಕೆಗಳು ಮನೆಗೆ ಬರುತ್ತಿದ್ದ ಕಾರಣ ಮನೆಯವರು ಕೂಡ ಓದುವ ಅಭ್ಯಾಸ ಬೆಳೆಸಿಕೊಳ್ಳುತ್ತಿದ್ದರು. ಪತ್ರಿಕೆಗಳಿಂದ ಸ್ಥಳೀಯ, ದೇಶ-ವಿದೇಶದ ಸುದ್ದಿಗಳು, ಕ್ರೀಡೆ ಮತ್ತು ಸಾಧನೆಗಳ ಬಗ್ಗೆ ಮಾಹಿತಿ ಸಿಗುತ್ತದೆ. ವಿಜಯವಾಣಿ ಪತ್ರಿಕೆ ಆರಂಭಿಸಿರುವ ಇಂತಹ ಕಾರ್ಯಕ್ರಮಗಳಿಂದ ಮಹಿಳೆಯರು ಪತ್ರಿಕೆಗಳನ್ನು ಓದಲು ಅನುಕೂಲವಾಗಲಿದೆ. ಮಹಿಳೆಯರು ತಮ್ಮ ಮಕ್ಕಳಿಗೂ ವಿಜಯವಾಣಿ ಪತ್ರಿಕೆಯನ್ನು ಓದುವಂತೆ ಉತ್ತೇಜಿಸಬೇಕು ಎಂದರು.

ಶಿಕ್ಷಕರಾದ ಮಂಜುಳಾ, ಮಮತಾ, ಜಾನಕಿ, ಸುಮಾ, ನೇತ್ರಾ, ಕಾವ್ಯಾ, ರೂಪಾ, ಹೇಮಲತಾ, ಲಕ್ಷ್ಮೀ, ಅನಿತಾ, ಸಂಧ್ಯಾ, ಲೀಲಾ, ಜಯಮ್ಮಾ, ವನಜಾ, ಸೌಮ್ಯಾ, ಸುಮಾ.ಎಸ್ ಇದ್ದರು.

ನಂಜನಗೂಡು ತಾಲೂಕಿನ ವಿಜೇತರು

1) ಎನ್.ಅಪೂರ್ವ, ಬೇವಿನಕೇರಿ ಬೀದಿ ನಂಜನಗೂಡು

2) ಸರೋಜಮ್ಮ, ಕೃಷ್ಣರಾಜಪುರ ಗ್ರಾಮ

3) ಎಚ್.ಎಸ್.ನಾಗವಲ್ಲಿ, ಆರ್‌ಪಿ ರಸ್ತೆ 7ನೇ ಕ್ರಾಸ್, ನಂಜನಗೂಡು

4) ಭವಾನಿ ಎಚ್.ಮಲ್ಲಿಗೆರೆ, ಮಂಡ್ಯ (ನಂಜನಗೂಡು ನಿವಾಸಿ )

5) ಎಂ.ವಿ.ಸುಮತಿ, ನ್ಯೂ ಕೆಎಚ್‌ಬಿ, ನಂಜನಗೂಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net