ಶಿವಲಿಂಗ ಮರುಪ್ರತಿಷ್ಠಾಪನೆ

23blrp3.
Published on

ಬೇಲೂರು: ಎರಡು ವರ್ಷದ ಹಿಂದೆ ಕಳವಾಗಿದ್ದ ಶ್ರೀ ಮಲ್ಲಿಕಾರ್ಜುನ ಶಿವಲಿಂಗವನ್ನು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಮರುಪ್ರತಿಷ್ಠಾಪನೆ ಮಾಡಲಾಯಿತು.


ಶಿವಲಿಂಗ ಪ್ರತಿಷ್ಠಾಪನೆ ಹಿನ್ನೆಲೆ ಬುಧವಾರ ದೇವತಾ ಪ್ರಾರ್ಥನೆ, ಪ್ರವೇಶ ಬಲಿಯೊಂದಿಗೆ, ಗಂಗಾ ಪ್ರವೇಶ, ಗೋ ಪ್ರವೇಶ, ಆಲಯ ಪ್ರತಿಷ್ಠೆ, ಆಲಯ ಪ್ರವೇಶ, ಕಳಶ ಸ್ಥಾಪನೆ, ವಾಸ್ತುಪೂಜೆ, ವಾಸ್ತು ಹೋಮ, ವಾಸ್ತುಬಲಿ, ರಾಕ್ಷಿಘ್ನ ಪೂಜೆ, ರಾಠೋಘ್ನ ಹೋಮ, ರಾಠೋಡ್ನ ಬಲಿ, ಅಘೋರ ಹೋಮ, ಅಘೋರ ಬಲಿ, ರಾತ್ರಿ ಶಿವಲಿಂಗ ಸ್ಥಾಪನೆ, ನಾಗದೇವರ ಸ್ಥಾಪನೆ ನೆರವೇರಿದವು.


ಗುರುವಾರ ಕಾರ್ತಿಕ ಶುದ್ಧ ಏಕಾದಶಿಯಂದು ನವಗ್ರಹ ಪೂಜೆ, ನವಗ್ರಹ ಹೋಮ, ದಿಕ್ಷಾಲಕ ಹೋಮ, ಆದಿವಾಸ ಹೋಮ, ತತ್ವಹೋಮ, ಕಲಾಭಿವೃದ್ಧಿ ಹೋಮ, ದೃಷ್ಟಿ ಹೋಮ, ಸಂಜೆ ಕಳಶಾಭಿಷೇಕ ಬಲಿ ಹೋಮಗಳು ಹಾಗೂ ಶ್ರೀ ರುದ್ರಹೋಮ ನೆರವೇರಿಸಿ ಶ್ರೀ ಮಲ್ಲಿಕಾರ್ಜುನ ಶಿವಲಿಂಗವನ್ನು ನೂರಾರು ಭಕ್ತರ ಸಮ್ಮುಖದಲ್ಲಿ ಮರುಪ್ರತಿಷ್ಠಾನೆ ಮಾಡಲಾಯಿತು. ಶಿವಲಿಂಗ ಪ್ರತಿಷ್ಠಾಪನೆ ಅಂಗವಾಗಿ ಮಹಿಳೆಯರು ಕಳಸಗಳನ್ನು ಹೊತ್ತು ತಂದು ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು.

ಶುಕ್ರವಾರ ಶತರುದ್ರಾಭಿಷೇಕ, ಮಹಾರುದ್ರಯಾಗ, ಮಹಾಮಂಗಳಾರತಿ ದೃಷ್ಟಿಪೂಜೆ, ಮಧ್ಯಾಹ್ನ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.

ಪೂಜೆ, ಹೋಮ ಹವನ ಕಾರ್ಯಕ್ರಮಗಳನ್ನು ಬಾಳೇಹೊನ್ನೂರಿನ ವೇ.ಬ್ರ.ಬಸವರಾಜಶಾಸತ್ರಿ, ಬೆಂಗಳೂರಿನ ವೇ.ಮೂ.ರಾಜಶೇಖರಶಾಸ್ತ್ರಿ, ಚನ್ನಗಿರಿಯ ವೇ.ಮೂ.ರುದ್ರೇಶ್‌ಶಾಸ್ತ್ರಿ, ಶಿಕಾರಿಪುರದ ವೇ.ಮೂ.ಗದಿಗೆಯ್ಯ ಶಾಸ್ತ್ರಿ, ಕೋಗೋಡಿನ ವೇ.ಮೂ. ಗುರುಸ್ವಾಮಿ ಶಾಸ್ತ್ರಿ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net