ಅಧ್ಯಕ್ಷರಾಗಿ ಜಯರಾಜ್ ಜೈನ್ ಪುನರಾಯ್ಕೆ

New Project (28)
Published on

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಬೆಳ್ತಂಗಡಿ ಏಕತಾ ಸೌಧದಲ್ಲಿ ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಜಯರಾಜ್ ಜೈನ್ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ ಇಲಾಖೆಯ ಶೆಟ್ಟಿ ನಾರಾಯಣ ಸಂಜೀವ ಖಜಾಂಚಿಯಾಗಿ ಚುನಾಯಿತರಾದರು.

ರಾಜ್ಯ ಪರಿಷತ್ ಸದಸ್ಯರಾಗಿ ಕಂದಾಯ ಇಲಾಖೆಯ ಪ್ರದೀಪ್ ಕುಮಾರ್ ಸಿ. ಆಯ್ಕೆಯಾದರು. ಸಂಘದ ಕಾರ್ಯದರ್ಶಿ ಹಾಗೂ ಇತರ ಪದಾಧಿಕಾರಿಗಳನ್ನು ಬೈಲಾ ನಿಯಮದಂತೆ ಅಧ್ಯಕ್ಷರು ನೇಮಕ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net