

ಬೆಂಗಳೂರು: ಬೆಂಗಳೂರು ನಗರ ಲಾರಿ ಸಾಗಣೆ ಮತ್ತು ಏಜೆಂಟ್ಸ್ ಸಂಘದ ನೂತನ ಅಧ್ಯಕ್ಷರಾಗಿ ಎಂ.ಸಿ.ರವಿ ಶಂಕರ್, ಉಪಾಧ್ಯಕ್ಷರಾಗಿ ಎಂ.ರಾಜೇಂದ್ರ, ಕಾರ್ಯದರ್ಶಿಯಾಗಿ ಕೃಷ್ಣೇಗೌಡ, ಜಂಟಿ ಕಾರ್ಯದರ್ಶಿಯಾಗಿ ಕೆ.ಎಂ.ಕದಿರಪ್ಪ ಮತ್ತು ಖಜಾಂಚಿಯಾಗಿ ಕೆ.ಶಂಕರ್ ಆಯ್ಕೆಯಾಗಿದ್ದಾರೆ.
ಸಂಘಕ್ಕೆ ನಡೆದ ಚುನಾವಣೆಯಲ್ಲಿ ರವಿ ಶಂಕರ್ ತಂಡದ 11 ಅಭ್ಯರ್ಥಿಗಳು ಜಯ ಸಾಧಿಸಿದ್ದರು. ಇವರ ಅಧಿಕಾರವಧಿ ಮುಂದಿನ 2 ವರ್ಷ ಇರಲಿದೆ.
ಬೆಂಗಳೂರು ಕಮರ್ಷಿಯಲ್ ಟ್ರಕ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಎಚ್.ರಾಜೇಶ್, ಮಾತನಾಡಿ, ರವಿಶಂಕರ್ ನೇತೃತ್ವದ ಸಂಘವು ಲಾರಿ ಉದ್ಯಮ ಏಳಿಗೆಗಾಗಿ ಶ್ರಮಿಸಲಿದೆ. ಬರುವ ದಿನಗಳಲ್ಲಿ ಲಾರಿ ಮಾಲೀಕರ ಸಮಸ್ಯೆಗಳ ಬೇಡಿಕೆ ಈಡೇರಿಸಲು ನಡೆಸುವ ಹೋರಾಟಕ್ಕೂ ಹೆಚ್ಚಿನ ಬಲ ಸಿಕ್ಕಿದೆ ಎಂದರು.