ಉಂಗುರದ ಬದಲು ಭಾರತಾಂಬೆಯ ಫೋಟೋ ಬದಲಿಸಿಕೊಂಡ ಟೆಕ್ಕಿಗಳು! ಇಡೀ ದೇಶಕ್ಕೆ ಮಾದರಿ ಈ ಜೋಡಿ

Engagement
Published on

ಚಿಕ್ಕಮಗಳೂರು: ಮದುವೆ ನಿಶ್ಚಿತಾರ್ಥ ಅಂದ್ರೆ ಮಧುಮಗ-ಮಧುಮಗಳು ಉಂಗುರ ಬದಲಿಸಿಕೊಳ್ತಾರೆ, ಹೂವಿನ ಮಾಲೆ ಹಾಕುತ್ತಾರೆ, ಎರಡೂ ಕುಟುಂಬಸ್ಥರು ತಾಂಬೂಲ ಬದಲಾಯಿಸಿಕೊಂಡು ಒಟ್ಟಾಗಿ ಸಿಹಿಯೂಟ ಮಾಡುವುದು ರೂಢಿ. ಇಲ್ಲಿ ಅವರವರ ಆರ್ಥಿಕತೆಯ ಅನುಕೂಲಕ್ಕೆ ತಕ್ಕಂತೆ ಅದ್ದೂರಿತನವೂ ಮೇಳೈಸಲಿದೆ. ಆದರೆ ಚಿಕ್ಕಮಗಳೂರು ನಗರದ ಯುವಜೋಡಿ ಇಂದು(ಫೆ.14) ಮದುವೆ ನಿಶ್ಚಿತಾರ್ಥ ಮಾಡಿಕೊಂಡ ಪರಿ ಮಾತ್ರ ಎಲ್ಲರಿಗೂ ಮಾದರಿ.

ಹೌದು, ಫೆ.14 ಪ್ರೇಮಿಗಳ ದಿನ. ಈ ದಿನಕ್ಕಾಗಿಯೇ ಕಾದು ಬಹುತೇಕರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಕ್ಷಾಂತರ ಮಂದಿ ಪ್ರಿಯಕರ/ಪ್ರಿಯತಮೆ ಬಳಿ ಪ್ರೇಮನಿವೇದನೆಗೆ ಹವಣಿಸಿದ್ದಾರೆ. ಲಕ್ಷಾಂತರ ಮಂದಿ ನಿಶ್ಚಿತಾರ್ಥವನ್ನೂ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ. ಆದರೆ, ಚಿಕ್ಕಮಗಳೂರು ನಗರದ ಹೊರವಲಯದ ಹಿರೇಮಗಳೂರಿನಲ್ಲಿ ರವೀಶ್ ಪಟೇಲ್ ಹಾಗೂ ವಿದ್ಯಾಶ್ರೀ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಮಾತ್ರ ಭಾರತೀಯರ ಪಾಲಿಗೆ ವಿಶೇಷವೇ ಸರಿ. ಬೆಂಗಳೂರಿನಲ್ಲಿ ಇಂಜಿನಿಯರ್​ ಕೆಲಸ ಮಾಡುತ್ತಿರುವ ಈ ಜೋಡಿಯ ನಿಶ್ಚಿತಾರ್ಥದ ವಿಶೇಷತೆ ಏನು ಗೊತ್ತಾ? ಇದನ್ನೂ ಓದಿರಿ PHOTOS| ಡಿಕೆಶಿ ಪುತ್ರಿ ಐಶ್ವರ್ಯಾ ಅದ್ಧೂರಿ ವಿವಾಹದ ಎಕ್ಸ್​ಕ್ಲೂಸಿವ್​ ಫೋಟೋಗಳು..!

ವಿದ್ಯಾಶ್ರೀ ಮತ್ತು ರವೀಶ್​ ನಿಶ್ಚಿತಾರ್ಥ ಕಾರ್ಯಕ್ರಮ ವಧುವಿನ ಸ್ವಗೃಹದಲ್ಲಿ ಗುರುಹಿರಿಯರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿತು. ಈ ವೇಳೆ ಉಂಗುರ ಹಾಕುವ ಬದಲು ಭಾರತಾಂಬೆಯ ಫೋಟೋವನ್ನ ಪರಸ್ಪರ ಬದಲಿಸಿಕೊಂಡು ಪ್ರೇಮಿಗಳ ದಿನವನ್ನ 'ಭಾರತಾಂಬೆಯ ದಿನ'ವೆಂದು ವಿಭಿನ್ನವಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಮಕ್ಕಳ ನಡೆಗೆ ಪಾಲಕರೂ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರೇಮಿಗಳ ದಿನ ಎಂಬುದು ನಮ್ಮ ಸಂಸ್ಕೃತಿಯಲ್ಲ. ಫೆ.14 ಪುಲ್ವಾಮ ದಾಳಿಯನ್ನ ನೆನಪಿಸುತ್ತೆ. ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಕಾರ್ಯ ದೇಶದೆಲ್ಲಡೆ ನಡೆಯುತ್ತಿದೆ. ಈ ನಡುವೆ ಟೆಕ್ಕಿಗಳಾದ ರವೀಶ್​ ಮತ್ತು ವಿದ್ಯಾಶ್ರೀ ನಡೆ ಎಂತಹವರಿಗೂ ಮಾದರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net