ಎಣ್ಣೆ ಬಿಡಗಲಾದೆ ಜೀವ ಬಿಟ್ಟ ಮದ್ಯ ವೇಸನಿ

Published on

ಹಾವೇರಿ: ಮದ್ಯ ಸೇವನೆ ಬಿಡಲಾಗದ ಮದ್ಯ ವೇಸನಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮಾಸೂರು-ಸಿದ್ದೇಶ್ವರ ನಗರದಲ್ಲಿ ಮಂಗಳವಾರ ನಡೆದಿದೆ.

ನಾಗರಾಜ ಹನುಮಂತಪ್ಪ ಮೆಗ್ಗಳ್ಳಿ (೪೫) ಮೃತ ವ್ಯಕ್ತಿ. ಈತ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದ. ಇದರಿಂದ ಮನನೊಂದು ಮನೆಯಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net