ಗ್ರಾಹಕರಿಂದ ಪಡಿತರ ವಿತರಕನ ತರಾಟೆ

ಗ್ರಾಹಕರಿಂದ ಪಡಿತರ ವಿತರಕನ ತರಾಟೆ
Published on

ಸಿದ್ದಾಪುರ: ಪಡಿತರ ವಿತರಣೆಯಲ್ಲಿ ವಿನಾಕಾರಣ ವಿಳಂಬ ಮಾಡುತ್ತಾ ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ನ್ಯಾಯಬೆಲೆ ಅಂಗಡಿ ವಿತರಕರನ್ನು ಸೋಮವಾರ ಗ್ರಾಹಕರು ತರಾಟೆಗೆ ತೆಗೆದುಕೊಂಡರು.

ಇಲ್ಲಿನ ಫೆಡರೇಷನ್ ಪಡಿತರ ವಿತರಣಾ ಕಚೇರಿಯಲ್ಲಿ ಗ್ರಾಹಕರನ್ನು ವಿನಾಕಾರಣ ಕಾಯಿಸಲಾಗುತ್ತಿದ್ದು, ಇದರಿಂದ ಅಸಮಾಧಾನಗೊಂಡ ಗ್ರಾಹಕರು ಸರ್ವರ್ ಇದ್ದರೂ ವಿಳಂಬ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ತಿಂಗಳು 20ನೇ ತಾರೀಕಿನಿಂದ 30ರವರೆಗೆ ಹತ್ತು ದಿನ ಮಾತ್ರ ಪಡಿತರ ಅಕ್ಕಿಯನ್ನು ವಿತರಣೆ ಮಾಡುತ್ತಿದ್ದು, ಮೊದಲೇ ಪಡಿತರದಾರರ ಬೆರಳಚ್ಚು ಪಡೆದುಕೊಂಡರು, ಸಮರ್ಪಕವಾಗಿ ಅಕ್ಕಿ ವಿತರಿಸುತ್ತಿಲ್ಲ ಎಂದು ಆರೋಪಿಸಿದರು.

ಈ ಭಾಗದಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರೇ ನೆಲೆಸಿದ್ದು, ಎರಡು ಮೂರು ದಿನ ಕೆಲಸ ಬಿಟ್ಟು ಬರಬೇಕಾಗುತ್ತದೆ. ಸಮರ್ಪಕ ರೀತಿಯಲ್ಲಿ ಪರಿತರ ಸರಬರಾಜು ಮಾಡಲು ಸಂಬಂಧಪಟ್ಟವರು ಕ್ರಮವಹಿಸಬೇಕು ಎಂದು ಸ್ಥಳೀಯರಾದ ಸಮ್ಮದ್ ಮನವಿಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net