

ಕಂಪ್ಲಿ: ತಾಲೂಕಿನಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು, ತಡೆಯಲು ಕ್ರಮ ವಹಿಸುವಂತೆ ಆಗ್ರಹಿಸಿ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ (ಜೆ.ಕಾರ್ತಿಕ್ ಬಣ) ತಾಲೂಕು ಪದಾಧಿಕಾರಿಗಳು ಆಹಾರ ನಿರೀಕ್ಷಕ ಬಿ.ವಿರೂಪಾಕ್ಷಗೌಡಗೆ ಗುರುವಾರ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಶಾಲೆಯಲ್ಲಿ ಅಕ್ಕಿ ಚೀಲ ಕಳವು
ತಾಲೂಕು ಅಧ್ಯಕ್ಷ ಸಿ.ಎ.ಚನ್ನಪ್ಪ ಮಾತನಾಡಿ, ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರದಾರರಿಂದ ಅಕ್ಕಿಯನ್ನು ತಾವೇ ಖರೀದಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಈ ರೀತಿ ಖರೀದಿಸಿದ ಪಡಿತರ ಅಕ್ಕಿಯನ್ನು ಕೆಲ ಮಧ್ಯವರ್ತಿಗಳು ವಾಹನಗಳಲ್ಲಿ ಸಾಗಣೆ ಮಾಡುತ್ತಿದ್ದಾರೆ. ಅಕ್ರಮಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪದಾಧಿಕಾರಿಗಳಾದ ವಿ.ನಾಗರಾಜ ಯಾದವ್, ಜಿ.ನಾಗರಾಜ್, ಬಿ.ಪಂಪಾಪತಿ, ಲಿಂಗರಾಜ ಯಾದವ್, ಸಿ.ರಮೇಶ್, ಎಚ್.ಮಂಜು ರವಿಚಂದ್ರ ಇತರರಿದ್ದರು.