ಶಾಲೆಯಲ್ಲಿ ಅಕ್ಕಿ ಚೀಲ ಕಳವು

23-KGL-4
Published on

ಕೊಳ್ಳೇಗಾಲ: ಪಟ್ಟಣದ ನೂರ್ ಮೊಹಲ್ಲಾದ ಸರ್ಕಾರಿ ಉರ್ದು ಪ್ರೌಢ ಶಾಲೆಯ ಅಡುಗೆ ಮನೆಯ ಕಿಟಕಿ ಮುರಿದು ಕಳ್ಳರು ಒಳ ನುಸುಳಿ 300 ಕೆ.ಜಿ ಅಕ್ಕಿ ಹಾಗೂ ಪಾತ್ರೆ, ಲೋಟ ಕಳವು ಮಾಡಿದ್ದಾರೆ.

ಶಾಲೆಯ ಕೊಠಡಿಯ ಒಳ ಹೋಗಿರುವ ಖದೀಮರು 60 ಕೆಜಿಯ 6 ಮೂಟೆ ಅಕ್ಕಿ, ಪಾತ್ರೆಗಳು, ಲೋ ಟ, ತಟ್ಟೆಗಳು ಮಿಕ್ಸಿಯ ಜಾರು ಸೇರಿದಂತೆ ಅಡುಗೆಗೆ ಬಳಸುವ ವಸ್ತುಗಳನ್ನು ಕಳವು ಮಾಡಿರುವುದಾಗಿ ಶಾಲೆಯ ಮುಖ್ಯ ಶಿಕ್ಷಕಿ ಭಾಗ್ಯ ಪಟ್ಟಣ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net