ಜ.31ರ ವರೆಗೆ ಪಡಿತರ ಚೀಟಿ ತಿದ್ದುಪಡಿ ಕಾಲ ಅವಕಾಶ

BPL APL Card
Published on

ಯಾದಗಿರಿ :  ಪಡಿತರ ಚೀಟಿ ತಿದ್ದುಪಡಿ (ಪಡಿತರ ಚೀಟಿಯಲ್ಲಿನ ಹೆಸರು ಬದಲಾವಣೆ, ಸದಸ್ಯರುಗಳನ್ನು ಸೇರ್ಪಡೆ ಮಾಡುವುದು ಮತ್ತು ಸದಸ್ಯರುಗಳ ಹೆಸರನ್ನು ತೆಗೆದು ಹಾಕುವುದು, ನ್ಯಾಯಬೆಲೆ ಅಂಗಡಿ ಬದಲಾವಣೆ ಮತ್ತು ವಿಳಾಸ ಬದಲಾವಣೆ) ಪ್ರಾರಂಭವಾಗಿದ್ದು, ನಿಮ್ಮ ಹತ್ತಿರದ ಗ್ರಾಮ್ ಓನ್ ಮತ್ತು ಕರ್ನಾಟಕ ಓನ್ ಕೇಂದ್ರಗಳಲ್ಲಿ 2025ರ ಜನವರಿ 31ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಯಾದಗಿರಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರು ಅನಿಲಕುಮಾರ ಡವಳಗಿ ಅವರು ತಿಳಿಸಿದ್ದಾರೆ.

ಆಹಾರ ಇಲಾಖೆಯ ಸೇವೆಯನ್ನು ನೀಡಲು ಅರ್ಜಿದಾರರಿಂದ (ನಾಗರಿಕರಿಂದ) 25 ರೂ.ಗಳನ್ನು ಪಡಿತರ ಚೀಟಿ ತಿದ್ದುಪಡಿ ಅರ್ಜಿಸಲ್ಲಿಕೆಗೆ ಸೇವಾ ಶುಲ್ಕವನ್ನು ಸರ್ಕಾರದಿಂದ ನಿಗಧಿಪಡಿಸಲಾಗಿರುತ್ತದೆ. ಸರ್ಕಾರ ನಿಗಧಿಪಡಿಸಿದ ಸೇವಾ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕವನ್ನು ಗ್ರಾಮ್ ಒನ್ ಮತ್ತು ಕರ್ನಾಟಕ ಒನ್ ಕೇಂದ್ರದಲ್ಲಿ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಪಡೆದರೆ ಜಿಲ್ಲಾ ಅಥವಾ ತಾಲ್ಲೂಕು ಆಹಾರ ಇಲಾಖೆ ತಹಸೀಲ್ದಾರರವರ ಕಛೇರಿಗೆ ಅಥವಾ ಸಹಾಯವಾಣಿ 1967 ಸಂಖ್ಯೆಗೆ ದೂರಗಳನ್ನು ಸಲ್ಲಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net