ಹೂವಿನಶಿಗ್ಲಿಯಲ್ಲಿ ಸಂಭ್ರಮದ ರಥೋತ್ಸವ

14 SVR 1
Published on

ವಣೂರ: ತಾಲೂಕಿನ ಹೂವಿನಶಿಗ್ಲಿ ಗ್ರಾಮದ ಶ್ರೀ ವಿರಕ್ತಮಠದ 42ನೇ ಜಾತ್ರಾ ಮಹೋತ್ಸವ, ಲಿಂ. ಶ್ರೀ ನಿರಂಜನ ಮಹಾಸ್ವಾಮಿಗಳ 11ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ರಥೋತ್ಸವ ಗುರುವಾರ ಸಂಭ್ರಮದಿಂದ ಜರುಗಿತು.

ಮಠಾಧ್ಯಕ್ಷ ಚನ್ನವೀರ ಮಹಾಸ್ವಾಮೀಜಿ ನೇತೃತ್ವದಲ್ಲಿ ಶ್ರೀಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ಮಠದ ಹಳೆಯ ವೈದಿಕ ವಿದ್ಯಾರ್ಥಿಗಳಿಂದ ಮಹಾ ಮಂಗಳಾರತಿ ಜರುಗಿತು.

ಪುರವಂತರ ಮೇಳದ ವೀರಗಾಸೆಯೊಂದಿಗೆ ಗ್ರಾಮದಲ್ಲಿ ಲಿಂ. ನಿರಂಜನ ಸ್ವಾಮೀಜಿ ಭಾವಚಿತ್ರ, ಗುರು ಗುಹೆಸಿದ್ಧೇಶ್ವರ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ಸಂಜೆ ವಿವಿಧ ಹರಗುರುಚರಮೂರ್ತಿಗಳ ಸಾನ್ನಿಧ್ಯದಲ್ಲಿ ವಿವಿಧ ವಾದ್ಯಮೇಳ, ನಂದಿಕೋಲು, ಕೀಲುಕುದುರೆ ನೃತ್ಯದೊಂದಿಗೆ ಮಹಾರಥೋತ್ಸವ ಜರುಗಿತು.

ಜ. 15ರಂದು ಸಂಜೆ 5ಕ್ಕೆ ಕಡುಬಿನ ಕಾಳಗ, 6ಕ್ಕೆ ವಿವಿಧ ಶ್ರೀಗಳ ಸಾನ್ನಿಧ್ಯದಲ್ಲಿ ಪ್ರವಚನ ಮಹಾಮಂಗಲ ಕಾರ್ಯಕ್ರಮ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net