

ಸೋಮವಾಪೇಟೆ: ದ ಗ್ರೀನ್ ಪ್ಲಾನೆಟ್ ಬಯೋಕ್ರೆಡಿಟ್ ಇಂಡಿಯಾ ಸಂಸ್ಥೆಯ ವಾರ್ಷಿಕ ಮಹಾಸಭೆ ಇತ್ತೀಚೆಗೆ ಗೋವಾದಲ್ಲಿ ನಡೆದಿದ್ದು, ಮಾದಾಪುರದ ಪ್ರಗತಿಪರ ಕೃಷಿಕ ರತೀಶ್ ಹಾಗೂ ಗೋಣಿಕೊಪ್ಪದ ಕೃಷಿಕ ದರ್ಶನ್ ಬೆಸ್ಟ್ ಫಾರ್ಮರ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದೇಶದ ಕೃಷಿಪದ್ದತಿಯಲ್ಲಿ ವಿಷಮುಕ್ತ ಆಹಾರ ಬೆಳೆಗೆ ಅಧ್ಯತೆ ನೀಡಬೇಕೆಂದು ದೇಶದ ರೈತರನ್ನು ಸಂಘಟಿಸುತ್ತಿರುವ ಕಮಲ್‌ನಾಥ್ ಜೀ ಮತ್ತು ಪ್ರೇಮ್‌ನಾಥ್ ಜೀ ಅವರ ಸಂಸ್ಥೆಯಾದ ಗ್ರೀನ್ ಪ್ಲಾನೆಟ್ ಬಯೋಕ್ರೆಡಿಟ್ ಇಂಡಿಯಾ ಸಂಸ್ಥೆಯ ಸದಸ್ಯತ್ವವನ್ನು ಜಿಲ್ಲೆಯ ಅನೇಕ ಕೃಷಿಕರು ಪಡೆದಿದ್ದು ಅದರಲ್ಲಿ ಜಿಲ್ಲೆಯ 11 ಜನ ಇತ್ತೀಚೆಗೆ ಗೋವಾದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದರು.
ಮಹಾಸಭೆಯಲ್ಲಿ ಗೋಣಿಕೊಪ್ಪದ ದರ್ಶನ್, ಸೋಮವಾರಪೇಟೆ ಯಶವಂತ್ ಮುಂದಾಳತ್ವದಲ್ಲಿ ಮಹೇಶ್, ತಿಲಕ್‌ಕುಮಾರ್, ರೂಪೇಶ್, ಯೋಗೇಶ್, ಧೂಮಪ್ಪ, ದಯಾನಂದ್, ಮಚ್ಚಂಡ ಆಶೋಕ್ ಮತ್ತು ಸತೀಶ್ ಭಾಗವಹಿಸಿ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಕೃಷಿಗಳ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು. ಕೊಡಗಿನ ಇಬ್ಬರು ಪ್ರಶಸ್ತಿ ಪಡೆದುಕೊಂಡರು. ಸಂಸ್ಥೆಯ ಮುಖ್ಯಸ್ಥರಾದ ಪ್ರೇಮ್‌ನಾಥ್ ಜೀ ಗೌರವಿಸಿದರು.