

ಹೆಬ್ರಿ: ರತನ್ ಟಾಟಾ ಅವರ ದೇಶ ಪ್ರೇಮ, ಸಾಮಾಜಿಕ ಚಿಂತನೆ, ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದು ಶಾಂತಿನಿಕೇತನ ಸೌಹಾರ್ದ ಸಹಕಾರಿ ಅಧ್ಯಕ್ಷ ರಾಜೇಶ್ ಹೇಳಿದರು.
ಶಾಂತಿನಿಕೇತನ ಯುವವೃಂದ ಹಾಗೂ ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘ ಕುಡಿಬೈಲ್ ಕುಚ್ಚೂರು ವತಿಯಿಂದ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ಯಶಸ್ವಿ ಉದ್ಯಮಿಯಾಗಿ, ಲಕ್ಷಾಂತರ ಜನರಿಗೆ ಉದ್ಯೋಗದಾತ, ಸರಳ ಸಜ್ಜನ ಸೌಮ್ಯ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಅಗಲಿರುವುದು ದೊಡ್ಡ ನಷ್ಟ. ಭಾರತಾಂಬೆ ಇಂದು ಹೆಮ್ಮೆಯ ಪುತ್ರನನ್ನು ಕಳೆದುಕೊಂಡಿದೆ ಎಂದರು. ಕೆ.ಗಣೆಶ್ ನರೇಂದ್ರ, ರಾಜೇಶ್ರೀ, ನಾಗರಾಜ್, ರಾಘವೇಂದ್ರ, ಸದಸ್ಯರು ಉಪಸ್ಥಿತರಿದ್ದರು.