ರಾಷ್ಟ್ರೀಯ ಲೋಕ ಅದಾಲತ್ ಸೆಪ್ಟೆಂಬರ್ 9ರಂದು

5ANKOLA1- loka adalat
Published on

ಅಂಕೋಲಾ: ರಾಜ್ಯ ಕಾನೂನು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಸೆ. 9ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ನಡೆಯಲಿದ್ದು, ನ್ಯಾಯಾಲಯದಲ್ಲಿ ಬಾಕಿ ಇರುವ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮನೋಹರ ಎಂ. ಹೇಳಿದರು.

ಈ ಕುರಿತು ನ್ಯಾಯಾಲಯದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಕರಣದ ರಾಜಿಯ ಮೂಲಕ ಎರಡೂ ಪಕ್ಷದವರನ್ನು ಒಂದು ಮಾಡುವುದು ಲೋಕ ಅದಾಲತ್ ಉದ್ದೇಶವಾಗಿದೆ. ಹಲವಾರು ವರ್ಷಗಳಿಂದ ಇತ್ಯರ್ಥವಾಗದೇ ಹಲವು ಪ್ರಕರಣಗಳು ಬಾಕಿ ಇದ್ದು, ಅವುಗಳಲ್ಲಿ ಹಣಕಾಸು ಸಂಸ್ಥೆಗಳ ಸಾಲ ಬಾಕಿ ಮತ್ತು ಜಮೀನು ವ್ಯಾಜ್ಯಗಳ ಪ್ರಕರಣಗಳು ಹೆಚ್ಚಿವೆ ಎಂದರು.

ಜೆಎಂಎಫ್​ಸಿ ನ್ಯಾಯಾಧೀಶ ಪ್ರಶಾಂತ ಬಾದವಾಡಗಿ ಮಾತನಾಡಿ, ಹಲವಾರು ಪ್ರಕರಣಗಳಲ್ಲಿ ಹಣಕಾಸಿನ ಸಂಸ್ಥೆಗಳಿಗೆ ಕಟ್ಟಬೇಕಾದ ಹಣದ ಮೊತ್ತವನ್ನು ಕಡಿಮೆಗೊಳಿಸಿ ಒಂದು ನಿರ್ಧಾರಕ್ಕೆ ಬಂದರೆ ಅನೇಕ ಪ್ರಕರಣಗಳು ಬಗೆಹರಿಯುತ್ತವೆ. ಮೀನುಗಾರಿಕೆಯಂತ ಉದ್ಯೋಗಕ್ಕೆ ಸಾಲ ಪಡೆದವರು ನಷ್ಟದಿಂದ ಸಾಲ ತೀರಸಲಾಗದೆ ಪ್ರಕರಣಗಳು ಹೆಚ್ಚುತ್ತಿವೆ. 99 ಪ್ರತಿಶತ ಹಣ ಪಾವತಿ ಮಾಡಿದರೂ ಬರಬೇಕಾದ 1 ಪ್ರತಿಶತ ಹಣಕ್ಕಾಗಿ ಪ್ರಕರಣ ಮುಗಿಸದೇ ಮುಂದುವರಿದ ಪ್ರಕರಣವೂ ನ್ಯಾಯಾಲಯದಲ್ಲಿದೆ ಎಂದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಅರ್ಪಿತಾ ಬೆಲ್ಲದ, ಎಪಿಪಿ ಗಿರೀಶ ಪಟಗಾರ, ಶಿಲ್ಪಾ ನಾಯ್ಕ, ತಾಪಂ ಪ್ರಭಾರ ಇಒ ಸುನೀಲ, ಪಿಎಸ್​ಐ ಉದ್ದಪ್ಪ ಅಶೋಕ ಧರೆಪ್ಪನವರ್, ಸಿಡಿಪಿಒ ಸವಿತಾ ಶಾಸ್ತ್ರಮಠ, ಶಿರಸ್ತೇದಾರ ಗಿರೀಶ ಜಾಂವಳೇಕರ್, ಅಬಕಾರಿ ಸಿಬ್ಬಂದಿ ಬಸಪ್ಪ ಅಂಗಡಿ, ನೋಟರಿ ಜಿಲ್ಲಾ ಸಂಘದ ಅಧ್ಯಕ್ಷ ನಾಗಾನಂದ ಬಂಟ, ವಕೀಲರಾದ ನಿತ್ಯಾನಂದ ಕವರಿ, ಎನ್.ಆರ್.ನಾಯಕ, ಎ.ಎನ್. ತಲಗೇರಿ, ವಿ.ಎಸ್. ನಾಯಕ, ಉಮೇಶ ನಾಯ್ಕ, ಆರ್.ಟಿ. ಗೌಡ, ರಾಜು ಹರಿಕಂತ್ರ, ಸುರೇಶ ಬಾನವಳಿಕರ, ಮಮತಾ ಕೆರೆಮನೆ, ಪಿ.ಆರ್. ನಾಯ್ಕ ಇದ್ದರು. ವಕೀಲರ ಸಂಘದ ಅಧ್ಯಕ್ಷ ವಿನೋದ ಶಾನಭಾಗ, ರಾಜು ಟಿ. ಗೌಡ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net