ಪ್ರಿಯಕರನ ಜತೆಗಿದ್ದ ಯುವತಿ ಮೇಲೆ ಅತ್ಯಾಚಾರ; ಕೊಲೆ ಸುದ್ದಿ ಭರಾಟೆಯಲ್ಲಿ ತಡವಾಗಿ ಬೆಳಕಿಗೆ ಬಂದ ರೇಪ್​ ಕೇಸ್​..

Munaz
ಮುನಾಜ್ ಅಹಮದ್
Published on

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊಲೆ ಪ್ರಕರಣಗಳ ಸುದ್ದಿಯ ಭರಾಟೆಯ ನಡುವೆ ಅತ್ಯಾಚಾರವೊಂದು ನಡೆದುಹೋಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದುರಂತವೆಂದರೆ, ಈ ಅತ್ಯಾಚಾರಕ್ಕೂ ಕೋಮುಸಂಘರ್ಷ ತಳುಕು ಹಾಕಿಕೊಂಡಿದೆ.

ಮಂಗಳೂರು ಬಳಿಯ ಸುರತ್ಕಲ್​ನ ಕಡಲ ತೀರದಲ್ಲಿ ಜುಲೈ 27ರಂದು ಈ ಅತ್ಯಾಚಾರ ನಡೆದಿದೆ. ಮೀನು ಸಾಗಾಟದ ಲಾರಿಯಲ್ಲಿ ಡ್ರೈವರ್ ಆಗಿರುವ ಮುನಾಜ್ ಅಹಮದ್​ ಎಂಬಾತನ ವಿರುದ್ಧ ಕೊಲೆ ಆರೋಪವಿದೆ. ಕಡಲತೀರದಲ್ಲಿ ಹಿಂದೂ ಯುವಕನ ಜತೆಗಿದ್ದ ಈ ಮುಸ್ಲಿಂ ಯುವತಿಗೆ, ಹಿಂದೂ ಯುವಕನ ಜತೆಗೆ ಯಾಕೆ ಸುತ್ತಾಡುತ್ತಿದ್ದಿ? ಎಂದು ಪ್ರಶ್ನೆ ಮಾಡಿದ್ದ ಮುನಾಜ್​, ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಯುವಕ ಮತ್ತು ಯುವತಿಯ ವಿಡಿಯೋ ಚಿತ್ರೀಕರಿಸಿ ಮನೆಯವರಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದ ಮುನಾಜ್, ಬಳಿಕ ಪ್ರಿಯಕರನ ಮೇಲೆ ಹಲ್ಲೆ ನಡೆಸಿ ಯುವತಿಯ ಮೇಲೆ ಬಲಾತ್ಕಾರ ಮಾಡಿದ್ದಾನೆ. ಈತ ಹಿಂದೆಯೂ ಬೆತ್ತಲೆ ವಿಡಿಯೋ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ. ಸದ್ಯ ಮಂಗಳೂರು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net