ಮಂತ್ರಾಲಯ ರಾಯರ ಮಠದಲ್ಲಿ ಸಾಮೂಹಿಕ ನೃತ್ಯದಲ್ಲಿ ಮಿಂಚಿದ ರೋಡ್ ಕಲ್ಲೂರ ಪ್ರತಿಭೆಗಳು

30-SDMAUG-02
Published on


ವಿಜಯವಾಣಿ ಸುದ್ದಿಜಾಲ ಚಿಂಚೋಳಿ
ಮoತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ ಆರಾಧನೆ ಮಹೋತ್ಸವ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಶ್ರೀನಾಮ ರಾಮಾಯಣಂ ನೃತ್ಯ ಪ್ರದರ್ಶನದಲ್ಲಿ ರೋಡ್‌ಕಲ್ಲೂರ ಗ್ರಾಮದ ಕಲಾವಿದರಾದ ತಾಯಿ-ಮಗಳಾದ ಪದ್ಮಾವತಿ ಹಾಗೂ ಅಭಿಶ್ರೀ ವಿಜಯಕುಮಾರ ನೃತ್ಯ ಮಾಡಿ ಗಮನಸೆಳೆದಿದ್ದಾರೆ.
ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಹಾಗೂ ಚನ್ನರಾಯಪಟ್ಟಣದ ನ್ಯಾಶನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಆಶ್ರಯದಲ್ಲಿ ಆಯೋಜಿಸಿದ್ದ ಏಕಕಾಲಕ್ಕೆ ನಾಮ ರಾಮಾಯಣಂ ನೃತ್ಯ ಪ್ರದರ್ಶನದಲ್ಲಿ ಸುಮಾರು ೩೫೦ ಕಲಾವಿದರು ನೃತ್ಯ ಮಾಡಿದ್ದರು. ಸುಮಾರು ೧೫ ನಿಮಿಷ ನಡೆದ ಸಾಂಪ್ರದಾಯಿಕ ನೃತ್ಯವೂ ಇಂಟರ್‌ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಗೆ ಸೇರಿದೆ.
ತಾಯಿ, ಮಗಳಾದ ಪದ್ಮಾವತಿ ಹಾಗೂ ಅಭಿಶ್ರೀ ನಿರ್ಭಯವಾಗಿ ೧೫ ನಿಮಿಷಗಳ ಕಾಲ ಶ್ರೀ ನಾಮ ರಾಮಾಯಣಂ ಗೀತೆಗೆ ನೃತ್ಯ ಪ್ರದರ್ಶಿಸಿದ್ದಾರೆ. ಬಳಿಕ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಕಲಾವಿದರಿಗೆ ಪ್ರಶಸ್ತಿ ಪತ್ರ ನೀಡಿ ಆಶೀರ್ವದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net