

ಪುತ್ತೂರು ಗ್ರಾಮಾಂತರ: ಮಂಗಳೂರು ವಿವಿ ಬಿಎಸ್ಸಿ ಫ್ಯಾಷನ್ ಡಿಸೈನ್ ಪದವಿ ೨೦೨೨-೨೩ನೇ ಸಾಲಿನ ಪರೀಕ್ಷೆಯಲ್ಲಿ ಸಂಪ್ಯದ ಅಕ್ಷಯ ಕಾಲೇಜು ವಿದ್ಯಾರ್ಥಿನಿ ಪ್ರಣಮ್ಯಾ ಸಿ.ಎ. ಅಗಳಿ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ನೀಡುತ್ತಿರುವ ಅಕ್ಷಯ ಕಾಲೇಜಿನ ಫ್ಯಾಷನ್ ಡಿಸೈನ್ ಪದವಿ ಎರಡನೇ ಬ್ಯಾಚ್‌ನಲ್ಲಿ ಪ್ರಣಮ್ಯಾ ಸಾಧನೆ ಮಾಡಿದ್ದು, ಎಲ್ಲ ಪದವಿಗಳಲ್ಲಿಯೂ ಇಲ್ಲಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುವುದರೊಂದಿಗೆ ಸಂಸ್ಥೆಗೆ ಶೇ.೧೦೦ ಫಲಿತಾಂಶ ಬಂದಿದೆ.